Pic credit - Instagram

Author: Rajesh Duggumane

ಕನ್ನಡಕ್ಕೆ ಬಂದ ಬಾಲಿವುಡ್ ನಟಿ ಅದಾ ಶರ್ಮಾ 

22 Sep 2026

ಮತ್ತೆ ಕನ್ನಡಕ್ಕೆ

ಬಿಗ್ ಬಾಸ್ ಖ್ಯಾತಿಯ ಕಾರ್ತಿಕ್ ಮಹೇಶ್ ಅಭಿನಯದ 'ರಾಮರಸ' ಸಿನಿಮಾ ಶೂಟಿಂಗ್ ಮುಗಿಸಿ ಪೋಸ್ಟ್-ಪ್ರೊಡಕ್ಷನ್ ಹಂತಕ್ಕೆ ತಲುಪಿದೆ.

ಬಿಗ್ ಸರ್ಪ್ರೈಸ್

ಈ ಸಿನಿಮಾದಲ್ಲಿ ಬಾಲಿವುಡ್ ಹಾಗೂ ದಕ್ಷಿಣ ಭಾರತದ ಖ್ಯಾತ ನಟಿ ಅದಾ ಶರ್ಮಾ ಅಭಿನಯಿಸುತ್ತಿರುವುದಾಗಿ ಚಿತ್ರತಂಡ ಅಧಿಕೃತವಾಗಿ ಪ್ರಕಟಿಸಿದೆ.

ರಣ ವಿಕ್ರಮ

ಈ ಮೊದಲು ಪುನೀತ್ ರಾಜ್‌ಕುಮಾರ್ ಅಭಿನಯದ 'ರಣ ವಿಕ್ರಮ' ಚಿತ್ರದಲ್ಲಿ ನಟಿಸಿದ್ದ ಅದಾ ಶರ್ಮಾ ಈಗ ಮತ್ತೆ ಸ್ಯಾಂಡಲ್‌ವುಡ್‌ಗೆ ಬಂದಿದ್ದಾರೆ.

ದಶ ಮಹಾವಿದ್ಯೆ

ಚಿತ್ರದಲ್ಲಿ ಅವರು ದಶ ಮಹಾವಿದ್ಯೆಯ ಸಾರವನ್ನು ಪರಿಚಯಿಸುವ ಅತ್ಯಂತ ಪ್ರಭಾವಶಾಲಿ ಪರಾಶಕ್ತಿಯ ಲೀಲೆಯ ರೂಪದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ತಾರಾಬಳಗ

ಚಿತ್ರದಲ್ಲಿ ಕಾರ್ತಿಕ್ ಮಹೇಶ್ ಜೊತೆಗೆ ಪ್ರಜ್ವಲ್ ದೇವರಾಜ್, ಶರಣ್ ಮತ್ತು ನಟಿ ಹೆಬ್ಬಾ ಪಟೇಲ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ತಾಂತ್ರಿಕ ಬಳಗ

ಬಿ.ಎಂ. ಗಿರಿರಾಜ್ ನಿರ್ದೇಶನದ ಈ ಚಿತ್ರಕ್ಕೆ ಕೃಷ್ಣ ಕುಮಾರ್ ಛಾಯಾಗ್ರಹಣ ಹಾಗೂ ಬಿ.ಜೆ. ಭರತ್ ಸಂಗೀತ ನಿರ್ದೇಶನ ಮಾಡಿದ್ದಾರೆ.

ಅದ್ಧೂರಿ ನಿರ್ಮಾಣ

ಗುರು ದೇಶಪಾಂಡೆ ಹಾಗೂ ವಿಕ್ರಂ ಆರ್ಯ ನಿರ್ಮಾಣದ ಈ ಬಿಗ್ ಬಜೆಟ್ ಸಿನಿಮಾದ ಟೀಸರ್ ಶೀಘ್ರದಲ್ಲೇ ಬಿಡುಗಡೆಯಾಗಲಿದೆ.