Pic credit - Instagram

Author: Rajesh Duggumane

30  June 2025

ರೇಸ್​​ಗಾಗಿ ಹೊಸ ಲುಕ್​​ನಲ್ಲಿ ಬಂದ ಅಜಿತ್ ಕುಮಾರ್ 

ರೇಸಿಂಗ್​​ನಲ್ಲಿ ಬ್ಯುಸಿ 

ನಟ ಅಜಿತ್ ಕುಮಾರ್ ಅವರು ರೇಸಿಂಗ್​​ನಲ್ಲಿ ಬ್ಯುಸಿ ಇದ್ದಾರೆ. ಅವರು ವಿವಿಧ ದೇಶಗಳಿಗೆ ತೆರಳಿ ಕಾರ್​ ರೇಸ್​ನಲ್ಲಿ ಭಾಗವಹಿಸುತ್ತಿದ್ದಾರೆ. 

ಬೇಕು ಸುರಕ್ಷೆ 

ಈ ರೀತಿ ಕಾರ್ ರೇಸ್ ಮಾಡುವಾಗ ಅಜಿತ್ ಕುಮಾರ್ ಅವರು ಸಾಕಷ್ಟು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುತ್ತಾರೆ. 

ರೇಸ್ ಗ್ರೂಪ್ 

ರೇಸ್ ಮಾಡಲು ಅಜಿತ್ ಕುಮಾರ್ ಅವರು ತಮ್ಮದೇ ಗ್ರೂಪ್​ನ ಕಟ್ಟಿದ್ದಾರೆ. ಇದರ ಅಡಿಯಲ್ಲಿ ಅವರು ವಿವಿಧ ಕಡೆಗಳಲ್ಲಿ ರೇಸ್​ನಲ್ಲಿ ಭಾಗಹವಿಸುತ್ತಾರೆ. 

ಅಪಘಾತ 

ರೇಸ್​​ಗಾಗಿ ತರಬೇತಿ ನಡೆಸುತ್ತಿದ್ದ ವೇಳೆ ಅಜಿತ್ ಕುಮಾರ್ ಅವರಿಗೆ ಅಪಘಾತ ಸಂಭವಿಸಿತ್ತು. ಈ ವೇಳೆ ಅವರು ಬಚಾವ್ ಆಗಿದ್ದರು. 

ಆದರೂ ನಿಲ್ಲಿಸಿಲ್ಲ..

ಸಾಕಷ್ಟು ಅಪಘಾತಗಳು ನಡೆದರೂ ಅಜಿತ್ ಅವರು ಸುಮ್ಮನೆ ಕುಳಿತಿಲ್ಲ. ಅವರು ರೇಸ್ ಮಾಡೋದನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. 

ಸುರಕ್ಷತೆಯೇ ರಕ್ಷೆ 

ಅಜಿತ್ ಅವರು ತೆಗೆದುಕೊಳ್ಳುವ ಸುರಕ್ಷತೆಯೇ ಅವರನ್ನು ಕಾಪಾಡುತ್ತಾ ಇದೆ ಎಂದರೂ ತಪ್ಪಾಗಲಾರದು. ಈ ಬಗ್ಗೆ ಅವರಿಗೆ ಖುಷಿಯಿದೆ. 

ಸಿನಿಮಾ 

ಇತ್ತೀಚೆಗೆ ಅಜಿತ್ ನಟನೆ ‘ಗುಡ್ ಬ್ಯಾಡ್ ಅಗ್ಲಿ’ ಸಿನಿಮಾ ರಿಲೀಸ್ ಆಯಿತು. ಈ ಚಿತ್ರ ಹೇಳಿಕೊಳ್ಳುವಂಥ ಯಶಸ್ಸು ಕಾಣಲಿಲ್ಲ. 

ವಿದುಮುಯಾಚಿ 

ಕೆಲ ತಿಂಗಳ ಹಿಂದೆ ಬಿಡುಗಡೆ ಕಂಡೆ ವಿದುಮುಯಾಚಿ ಸಿನಿಮಾ ಕೂಡ ದೊಡ್ಡ ಮಟ್ಟದಲ್ಲಿ ಯಶಸ್ಸು ಕಾಣಲು ವಿಫಲವಾಯಿತು.