Pic credit - Instagram

Author: Rajesh Duggumane

ಐದು ತಾಸು ನಕ್ಕಿದ್ದಕ್ಕೆ ಹೆಚ್ಚಾಯ್ತು ಆಲಿಯಾ ಭಟ್ ಹಾರ್ಟ್​ ಬೀಟ್ 

30 June 2026

ಆಲ್ಫಾ ಸಿನಿಮಾ

ಆಲಿಯಾ ಭಟ್ ತಮ್ಮ ಮುಂಬರುವ ಭಾರಿ ನಿರೀಕ್ಷೆಯ ಸ್ಪೈ ಆಕ್ಷನ್ ಚಿತ್ರ 'ಆಲ್ಫಾ' ಬಿಡುಗಡೆಗೆ ಸಂಪೂರ್ಣವಾಗಿ ಸಜ್ಜಾಗುತ್ತಿದ್ದಾರೆ.

ಜೈಪುರ ಪ್ರಚಾರ

ಇತ್ತೀಚೆಗೆ ಆಲಿಯಾ ಮತ್ತು ಸಹನಟಿ ಶರ್ವರಿ ಜೈಪುರಕ್ಕೆ ಭೇಟಿ ನೀಡಿ ಅಲ್ಲಿನ ವಿದ್ಯಾರ್ಥಿಗಳು ಹಾಗೂ ಅಭಿಮಾನಿಗಳೊಂದಿಗೆ ಸಂವಾದ ನಡೆಸಿದರು.

ಹಾಸ್ಯ ಕಾರ್ಯಕ್ರಮ

 ಈ ಈವೆಂಟ್‌ನಲ್ಲಿ ಆಲಿಯಾ ಅವರು 'ಇಂಡಿಯಾಸ್ ಗಾಟ್ ಲೇಟೆಂಟ್' ಶೋನಲ್ಲಿ ಭಾಗವಹಿಸಿದ ತಮ್ಮ ಮಜಾವಾದ ಅನುಭವವನ್ನು ಹಂಚಿಕೊಂಡಿದ್ದಾರೆ.

ನಗುವಿನ ಅಲೆ

ಸುಮಾರು ಐದು ಗಂಟೆಗಳ ಕಾಲ ನಡೆದ ಶೂಟಿಂಗ್‌ನಲ್ಲಿ ತಾವು ತಡೆಯಲಾರದೆ ಸತತವಾಗಿ ನಕ್ಕಿದ್ದಾಗಿ ಆಲಿಯಾ ಭಟ್ ಹೇಳಿದ್ದಾರೆ.

ಹೆಲ್ತ್ ಟ್ರ್ಯಾಕರ್

 ಅತಿಯಾಗಿ ನಕ್ಕಿದ್ದರಿಂದ ಅವರ ಕೈಯಲ್ಲಿದ್ದ ಸ್ಮಾರ್ಟ್ ವಾಚ್ ಅವರು ತೀವ್ರ ಒತ್ತಡದಲ್ಲಿದ್ದಾರೆ ಎಂದು ತಪ್ಪಾಗಿ ಭಾವಿಸಿತ್ತಂತೆ.

ಆಕ್ಷನ್ ಕನಸು

ಆಲ್ಫಾ ಚಿತ್ರಕ್ಕಾಗಿ ಭಾರಿ ತರಬೇತಿ ಪಡೆದಿದ್ದು, ಈ ಮಟ್ಟದ ಆಕ್ಷನ್ ದೃಶ್ಯಗಳನ್ನು ಮಾಡುವುದು ತಮ್ಮ ಕನಸಾಗಿತ್ತು ಎಂದಿದ್ದಾರೆ.

ಅದ್ಭುತ ತಾರಾಗಣ

 ಅನಿಲ್ ಕಪೂರ್, ಬಾಬಿ ಡಿಯೋಲ್ ಮತ್ತು ಶರ್ವರಿ ಅವರೊಂದಿಗೆ ನಟಿಸಿದ್ದು ತಮಗೆ ಒಂದು ಹೊಸ ಕುಟುಂಬದಂತೆ ಅನಿಸಿತು.