Pic credit - Instagram

Author: Rajesh Duggumane

ತಮ್ಮ ಫ್ಯಾನ್ಸ್​​ಗೆ ಬಂಪರ್ ಗಿಫ್ಟ್ ಕೊಟ್ಟ ನಟ ಅಲ್ಲು ಅರ್ಜುನ್ 

29 July 2026

ಖಡಕ್ ಸಂದೇಶ

ನಟ ಅಲ್ಲು ಅರ್ಜುನ್ ಅವರು ಸೋಶಿಯಲ್ ಮೀಡಿಯಾದಲ್ಲಿ ಇತರರನ್ನು ಟ್ರೋಲ್ ಮಾಡಿ ಸಮಯ ಹಾಳು ಮಾಡಿಕೊಳ್ಳಬೇಡಿ ಎಂದಿದ್ದಾರೆ.

ಅಮೂಲ್ಯ ಕಿವಿಮಾತು

ಯಾರಾದರೂ ಇಷ್ಟವಾಗದಿದ್ದರೆ ಅವರನ್ನು ದ್ವೇಷಿಸುವ ಬದಲು ಸ್ವಂತ ಬೆಳವಣಿಗೆಯತ್ತ ಗಮನ ಹರಿಸಿ ಎಂದು ಬನ್ನಿ ತಿಳಿಸಿದ್ದಾರೆ.

ತಮಾಷೆಯ ಸಲಹೆ

ಇಷ್ಟವಿಲ್ಲದವರಿಗಾಗಿ ಶಕ್ತಿ ವ್ಯರ್ಥ ಮಾಡದೆ ಇಷ್ಟವಾದ ಹುಡುಗಿಯ ಮನೆ ಮುಂದೆ ಕಾಯಿರಿ ಎಂದು ನಟ ಹೇಳಿದ್ದಾರೆ.

ಉಚಿತ ವಿಮೆ

ಅಲ್ಲು ಅರ್ಜುನ್ ಫ್ಯಾನ್ಸ್ ಅಸೋಸಿಯೇಷನ್ ಸದಸ್ಯರಿಗಾಗಿ ಯಾವುದೇ ಶುಲ್ಕವಿಲ್ಲದೆ ಉಚಿತ ಅಪಘಾತ ವಿಮೆ ಘೋಷಿಸಲಾಗಿದೆ.

ಲಕ್ಷಗಳ ನೆರವು

ರಾಜ್ಯ ಸಮಿತಿ ಸದಸ್ಯರಿಗೆ 5 ಲಕ್ಷ ಹಾಗೂ ಜಿಲ್ಲಾ ಸದಸ್ಯರಿಗೆ 3 ಲಕ್ಷ ರೂಪಾಯಿ ವಿಮೆ ಸಿಗಲಿದೆ.

ಅಪೂರ್ವ ಭೇಟಿ

ಹೈದರಾಬಾದ್‌ನಲ್ಲಿ ನಡೆದ ಸಮಾರಂಭದಲ್ಲಿ ಆರು ಗಂಟೆಗಳ ಕಾಲ ನಿಂತೇ ಅಭಿಮಾನಿಗಳಿಗೆ ಅಲ್ಲು ಅರ್ಜುನ್ ಫೋಟೋ ನೀಡಿದ್ದಾರೆ.

ಹೃದಯಪೂರ್ವಕ ಧನ್ಯವಾದ

ವಿವಿಧ ಮೂಲೆಗಳಿಂದ ಬಂದಿದ್ದ ಅಭಿಮಾನಿಗಳ ಅಪಾರ ಪ್ರೀತಿಗೆ ಎಕ್ಸ್ ಖಾತೆಯಲ್ಲಿ ಐಕಾನ್ ಸ್ಟಾರ್ ಭಾವುಕ ಕೃತಜ್ಞತೆ ಸಲ್ಲಿಸಿದ್ದಾರೆ.