Pic credit - Instagram

Author: Rajesh Duggumane

ಹೊಸ ಫೋಟೋಶೂಟ್ ಮೂಲಕ ಮಿಂಚಿದ ನಟಿ ಅನ್ವಿತಾ ಸಾಗರ್ 

29 July 2026

ಹೊಸ ಪೋಸ್ಟ್

ನಟಿ ಅನ್ವಿತಾ ಸಾಗರ್ ತಮ್ಮ ಅಧಿಕೃತ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿರುವ ಹೊಸ ಫೋಟೋಗಳು ಈಗ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿವೆ.

ಸುಂದರ ಫೋಟೋ

ಈ ಕ್ಯೂಟ್ ಫೋಟೋದಲ್ಲಿ ಮಲ್ಲಿ ಸಖತ್ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದು, ಅಭಿಮಾನಿಗಳು ಲೈಕ್ಸ್ ಹಾಗೂ ಕಾಮೆಂಟ್‌ಗಳ ಸುರಿಮಳೆಗೈಯುತ್ತಿದ್ದಾರೆ.

ಅಭಿಮಾನಿಗಳ ಮೆಚ್ಚುಗೆ

ಸದಾ ಸಂಪ್ರದಾಯಬದ್ಧ ಉಡುಗೆಯಲ್ಲಿ ಕಂಗೊಳಿಸುತ್ತಿದ್ದ ನಟಿಯ ಈ ಮಾಡರ್ನ್ ಅವತಾರ ಕಂಡು ವೀಕ್ಷಕರು ಫುಲ್ ಫಿದಾ ಆಗಿ ಭೇಷ್ ಎನ್ನುತ್ತಿದ್ದಾರೆ.

ಧಾರಾವಾಹಿ ಯಶಸ್ಸು

ಸದ್ಯ ಟಿಆರ್‌ಪಿ ರೇಟಿಂಗ್‌ನಲ್ಲಿ ಟಾಪ್ ಐದರ ಸ್ಥಾನದಲ್ಲಿ ಮುನ್ನುಗ್ಗುತ್ತಿರುವ ‘ಅಮೃತಧಾರೆ’ ಸೀರಿಯಲ್ ಮೂಲಕ ಅನ್ವಿತಾ ಮನೆಮಾತಾಗಿದ್ದಾರೆ.

ಪಾತ್ರದ ಹವಾ:

ಕಥೆಯಲ್ಲಿ ಮಲ್ಲಿಗೆ ಎರಡನೇ ಮದುವೆಯಾದ ನಂತರ ಅವಳ ಜೀವನದ ರೋಚಕ ತಿರುವುಗಳು ಪ್ರೇಕ್ಷಕರಲ್ಲಿ ಭಾರೀ ಕುತೂಹಲ ಮೂಡಿಸುತ್ತಿವೆ

ಮುಂದಿನ ಹಾದಿ

ಸಿವಿಲ್ ಪರೀಕ್ಷೆ ಪಾಸ್ ಆಗಿರುವ ಮಲ್ಲಿ ಶೀಘ್ರದಲ್ಲೇ ಸರ್ಕಾರಿ ಅಧಿಕಾರಿಯಾಗಿ ಮಿಂಚಲಿದ್ದು, ಸೀರಿಯಲ್‌ನಲ್ಲಿ ಹೊಸ ಅಧ್ಯಾಯ ಶುರುವಾಗಲಿದೆ.

ಖುಷಿಯ ಮೂಡ್

ಶೂಟಿಂಗ್ ಬ್ಯುಸಿ ಶೆಡ್ಯೂಲ್ ನಡುವೆಯೂ ನಟಿ ಅನ್ವಿತಾ ತಮಗಾಗಿ ಸಮಯ ಮಾಡಿಕೊಂಡು ಈ ಅಪರೂಪದ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ.