Pic credit - Instagram

Author: Rajesh Duggumane

ಬಿಗ್ ಬಾಸ್ ಮನೆಯಲ್ಲಿ ದಾರಿ ತಪ್ಪುತ್ತಿದೆ ನಟಿ ಆಸಿಯಾ ಆಟ?

29 Sep 2026

ಮೆಚ್ಚುಗೆಯ ಮಳೆ

ಬಿಗ್ ಬಾಸ್ ಕನ್ನಡ ಸೀಸನ್ 13ರ ಆಟದಲ್ಲಿ ಆಸಿಯಾ ಅತ್ಯುತ್ತಮವಾಗಿ ಆಡಿ ಕಿಚ್ಚ ಸುದೀಪ್‌ರಿಂದ ಸಖತ್ ಚಪ್ಪಾಳೆ ಗಿಟ್ಟಿಸಿಕೊಂಡಿದ್ದರು.

ದಾರಿ ತಪ್ಪಿದ ಆಟ

ವಾರವಿಡೀ ಆಸಿಯಾ ಮೆಚ್ಚುಗೆ ಪಡೆದುಕೊಂಡ ಬೆನ್ನಲ್ಲೇ ಈಗ ಮನೆಯಲ್ಲಿ ತಪ್ಪು ಹೆಜ್ಜೆಗಳನ್ನಿಟ್ಟು ತಮ್ಮ ಆಟದ ಹಾದಿಯನ್ನು ತಪ್ಪಿಸಿಕೊಳ್ಳುತ್ತಿದ್ದಾರೆ.

ಪಕ್ಷಪಾತದ ಬೆಂಬಲ

ನಿಯಮ ಉಲ್ಲಂಘಿಸಿ ಶಿಕ್ಷೆಗೆ ಒಳಗಾಗಿದ್ದ ಯಶಸ್ ಅವರ ಪರವಾಗಿ ಆಸಿಯಾ ನಿಂತಿರುವುದು ವೀಕ್ಷಕರಲ್ಲಿ ತೀವ್ರ ಅಸಮಾಧಾನ ಮೂಡಿಸಲು ಕಾರಣವಾಗಿದೆ.

ನಿಯಮಗಳ ಉಲ್ಲಂಘನೆ

ಫ್ಲೈಟ್‌ನಿಂದ ಬಂದು ಸೋಫಾ ಮೇಲೆ ಕುಳಿತ ಯಶಸ್‌ನ ತಪ್ಪನ್ನು ತಿದ್ದುವ ಬದಲು ಆಸಿಯಾ ಅವರಿಗೆ ಅನಗತ್ಯವಾಗಿ ಸಾಥ್ ನೀಡಿದ್ದಾರೆ.

ಮೊಟ್ಟೆಯ ರಾದ್ಧಾಂತ

ಬಿಗ್ ಬಾಸ್ ಮನೆಗೆ ನೀಡಿದ ಮೊಟ್ಟೆಗಳನ್ನು ಹಿಂಪಡೆದಾಗಲೂ ಆಸಿಯಾ ಅವರು ಯಶಸ್ ಪರ ವಹಿಸಿ ನಾಲ್ಕು ಮೊಟ್ಟೆ ನೀಡುವುದಾಗಿ ಹೇಳಿದ್ದಾರೆ.

ವೀಕ್ಷಕರ ಆಕ್ರೋಶ

ಇತರರು ತಪ್ಪು ಮಾಡಿದಾಗ ನಿಂತು ಪ್ರಶ್ನಿಸುವ ಆಸಿಯಾ, ಯಶಸ್ ವಿಚಾರದಲ್ಲಿ ಹೀಗೆ ದ್ವಿಮುಖ ನೀತಿ ತೋರಿದ್ದು ಖಂಡನೀಯವಾಗಿದೆ.

ಭವಿಷ್ಯಕ್ಕೆ ಕಂಠಕ

ಸ್ವಪಕ್ಷಪಾತದ ನಡವಳಿಕೆಯನ್ನು ತಿದ್ದಿಕೊಳ್ಳದಿದ್ದರೆ ಆಸಿಯಾ ಅವರ ಬಿಗ್ ಬಾಸ್ ಪಯಣ ಮತ್ತು ಜನಪ್ರಿಯತೆಗೆ ಧಕ್ಕೆಯಾಗುವುದು ಖಂಡಿತ.