Pic credit - Instagram

Author: Rajesh Duggumane

ತಮ್ಮದೇ ಸಿನಿಮಾ ಮೂಹರ್ತಕ್ಕೆ ಭವ್ಯಾ ಗೌಡ ಗೈರು 

11 July 2026

ಭವ್ಯಾ ಗೌಡ

ಜನಪ್ರಿಯ ನಟಿ ಭವ್ಯಾ ಗೌಡ ಅವರು ಸದ್ಯ ಕರ್ಣ ಧಾರಾವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಕರ್ಣನ ಮದುವೆ

ಸೀರಿಯಲ್ ಕಥೆಯ ರೋಚಕ ತಿರುವಿನಲ್ಲಿ ಅವರು ಈಗ ನಾಯಕ ಕರ್ಣನ ಜೊತೆ ಮದುವೆಯಾಗಿದ್ದಾರೆ.

ಹೊಸ ಸಿನಿಮಾ

ಕಿರುತೆರೆಯಲ್ಲಿ ಯಶಸ್ಸು ಕಾಣುತ್ತಿರುವ ನಟಿ, ಇದರ ಮಧ್ಯೆ ಹೊಸದೊಂದು ಸಿನಿಮಾವನ್ನು ಒಪ್ಪಿಕೊಂಡಿದ್ದಾರೆ.

ದೇವಿ ಚಿತ್ರ

ಭವ್ಯಾ ಗೌಡ ಅವರು ನಟಿಸಲಿರುವ ಈ ಹೊಸ ಚಿತ್ರಕ್ಕೆ 'ದೇವಿ' ಎಂದು ಹೆಸರಿಡಲಾಗಿದೆ.

ಚಿತ್ರದ ಶೀರ್ಷಿಕೆ

ಈ ಸಿನಿಮಾದ ವಿಭಿನ್ನವಾದ ಹೆಸರು ಈಗ ಚಿತ್ರರಂಗದಲ್ಲಿ ಭಾರಿ ಕುತೂಹಲವನ್ನು ಮೂಡಿಸುವಲ್ಲಿ ಯಶಸ್ವಿಯಾಗಿದೆ.

ಅವರೇ ಗೈರು

ಈ ಚಿತ್ರದ ಮುಹೂರ್ತ ಸಮಾರಂಭಕ್ಕೆ ಅವರೇ ಗೈರಾಗಿದ್ದಾರೆ. ಕರ್ಣ ಧಾರಾವಾಹಿ ಶೂಟ್​​ನಲ್ಲಿ ಅವರು ಬ್ಯುಸಿ ಇದ್ದರು. 

ಚಿತ್ರೀಕರಣ ಆರಂಭ

ಶೀಘ್ರದಲ್ಲೇ ಈ ಚಿತ್ರದ ಶೂಟಿಂಗ್ ಆರಂಭವಾಗಲಿದ್ದು, ನಟಿ ಬೆಳ್ಳಿತೆರೆಯಲ್ಲೂ ಮಿಂಚಲು ಸಜ್ಜಾಗಿದ್ದಾರೆ.