Pic credit - Instagram

Author: Rajesh Duggumane

ನೆರವೇರಿತು ದಿವ್ಯಾ ಗೌಡ ಹೂ ಮುಡಿಸೋ ಶಾಸ್ತ್ರ 

20 June 2026

ಮದುವೆ ಸಂಭ್ರಮ

ಬಿಗ್ ಬಾಸ್ ಖ್ಯಾತಿಯ ಭವ್ಯಾ ಗೌಡ ಅವರ ಸಹೋದರಿ ದಿವ್ಯಾ ಗೌಡ ಮನೆಯಲ್ಲಿ ಹೂ ಮುಡಿಸೋ ಶಾಸ್ತ್ರ ಅತ್ಯಂತ ವೈಭವದಿಂದ ನೆರವೇರಿದೆ. 

ಸಹೋದರಿ ಮಿನುಗು

ಭವ್ಯಾ ಗೌಡ ಈ ಹಿಂದೆ ಬಿಗ್ ಬಾಸ್ ಮನೆಗೆ ಹೋದಾಗ ಸಹೋದರಿ ದಿವ್ಯಾ ವೇದಿಕೆ ಮೇಲೆ ಬಂದು ಮಿಂಚಿದ್ದರು.

ಶೀಘ್ರವೇ ವಿವಾಹ

ದಿವ್ಯಾ ಹಾಗೂ ಹೇಮಂತ್ ವಿವಾಹ ಶೀಘ್ರವೇ ನೆರವೇರಲಿದೆ ಎಂದು ಹೇಳಲಾಗುತ್ತಾ ಇದೆ.  ದಿನಾಂಕ ಇನ್ನಷ್ಟೇ ರಿವೀಲ್ ಆಗಬೇಕಿದೆ.

ವರನ ವಿವರ

 ಕಲರ್ಸ್ ಕನ್ನಡ ವಾಹಿನಿಯಲ್ಲಿ ಕೆಲಸ ಮಾಡುತ್ತಿರುವ ಹೇಮಂತ್ ಕುಮಾರ್ ಅವರು ದಿವ್ಯಾ ಗೌಡ ಅವರನ್ನು ಮದುವೆಯಾಗಲಿರುವ ಹುಡುಗನಾಗಿದ್ದಾರೆ.  

ಬಿಗ್ ಬಾಸ್ 

ಈ ಹಿಂದೆ ಬಿಗ್ ಬಾಸ್ ರಿಯಾಲಿಟಿ ಶೋಗೂ ಕೆಲಸ ಮಾಡಿದ್ದ ಹೇಮಂತ್ ಕುಮಾರ್ ಸದ್ಯ ಕಿರುತೆರೆಯಲ್ಲಿ ಗುರುತಿಸಿಕೊಂಡಿದ್ದಾರೆ.  

ಉದ್ಯಮಿ ದಿವ್ಯಾ

ಸದ್ಯ ದಿವ್ಯಾ ಗೌಡ ಅವರು ಉದ್ಯಮ ರಂಗದಲ್ಲಿ ಸಕ್ರಿಯರಾಗಿದ್ದು ಸ್ವಂತ ಬಿಸ್ನೆಸ್ ಅನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ. 

ತಾರೆಯರ ಮಿನುಗು

 ಈ ಅದ್ಧೂರಿ ಕೌಟುಂಬಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಭವ್ಯಾ ಗೌಡ ಅವರು ಅತ್ಯಂತ ಸ್ಟೈಲಿಶ್ ಲುಕ್‌ನಲ್ಲಿ ಕಾಣಿಸಿಕೊಂಡು ಮಿಂಚಿದ್ದಾರೆ.