Pic credit - Instagram

Author: Rajesh Duggumane

ಮೊದಲ ವಾರವೇ ಕಳಪೆ ಪಡೆದ ವೈಲ್ಡ್ ಕಾರ್ಡ್ ಗಾನವಿ 

01 Oct 2026

ಗಾನವಿ ಕಳಪೆ

‘ಬಿಗ್ ಬಾಸ್ ಕನ್ನಡ 13’ರಲ್ಲಿ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟ ಗಾನವಿಗೆ ಮೊದಲ ವಾರವೇ ಕಳಪೆ ಸಿಕ್ಕಿದೆ.

ಉತ್ತಮ ಪ್ರದರ್ಶನ

ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ಗಾನವಿ ತಮಗೆ ನೀಡಿದ ಭಾರವನ್ನು ಎತ್ತಿ ಹಿಡಿದು ಅತ್ಯುತ್ತಮ ಆಟವನ್ನು ಪ್ರದರ್ಶಿಸಿ ತಂಡವನ್ನು ಗೆಲ್ಲಿಸಿದ್ದರು.

ತಂಡದ ನಾಯಕಿ

ಗಾನವಿ ತಂಡದ ನಾಯಕಿಯಾಗಿ ಎಲ್ಲರನ್ನೂ ಸಂಭಾಳಿಸಿಕೊಂಡು ಹೋಗಿ ಯಶಸ್ಸು ತಂದುಕೊಟ್ಟರೂ ಅವರಿಗೆ ಯಾವುದೇ ಪ್ರಯೋಜನವಾಗಲಿಲ್ಲ.

ಬಿಗ್ ಶಾಕ್

ಟಾಸ್ಕ್ ಗೆದ್ದ ಖುಷಿಯಲ್ಲಿದ್ದ ಗಾನವಿಗೆ ಗಗನ್ ಸೇರಿದಂತೆ ಮನೆಯ ಅನೇಕ ಸ್ಪರ್ಧಿಗಳು ಕಳಪೆ ನೀಡುವ ಮೂಲಕ ಶಾಕ್ ನೀಡಿದರು.

ಉಸ್ತುವಾರಿ ಎಡವಟ್ಟು

ಟಾಸ್ಕ್ ಸರಿಯಾಗಿ ನಡೆಸದ ಉಸ್ತುವಾರಿಗಳಾದ ಮಂಜು ಹಾಗೂ ಲಿಖಿತ್ ಕಳಪೆ ಪಡೆಯುವುದರಿಂದ ಸಂಪೂರ್ಣವಾಗಿ ಬಚಾವ್ ಆಗಿದ್ದಾರೆ.

ನೆಟ್ಟಿಗರ ಆಕ್ರೋಶ

ಅರ್ಹರಾದವರನ್ನು ಬಿಟ್ಟು ಕಳಪೆ ನೀಡಿದ್ದಕ್ಕಾಗಿ ಸೋಶಿಯಲ್ ಮೀಡಿಯಾದಲ್ಲಿ ವೀಕ್ಷಕರು ಮನೆಮಂದಿಯ ನಿರ್ಧಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಮುಂದಿನ ಹಾದಿ

 ವಾರದ ಮೊದಲೇ ಕಳಪೆ ಪಡೆದಿರುವ ಗಾನವಿ ಇನ್ಮುಂದೆ ಮನೆಯಲ್ಲಿ ಧೈರ್ಯದಿಂದ ಆಟವಾಡಬೇಕಾದ ಸವಾಲು ಎದುರಾಗಿದೆ.