Pic credit - Instagram

Author: Rajesh Duggumane

ಮೊದಲ ದಿನವೇ ಹಲ್​ಚಲ್ ಎಬ್ಬಿಸಿದ ಘಾಟಿ ಗಾನವಿ 

28 Sep 2026

ವೈಲ್ಡ್ ಎಂಟ್ರಿ

ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟ ಘಾಟಿ ಗಾನವಿ ಗೌಡ ಭರ್ಜರಿ ಧಮಾಕಾ ಸೃಷ್ಟಿಸಿದ್ದಾರೆ.

ಮಾಸ್ ಎಂಟ್ರಿ

ಮನೆಗೆ ಕಾಲಿಡುತ್ತಿದ್ದಂತೆ ಹಾಲಿ ಸ್ಪರ್ಧಿಗಳಿಗೆ ಕಟ್ಟುನಿಟ್ಟಿನ ಪ್ರಶ್ನೆಗಳನ್ನು ಕೇಳಿ ಮೊದಲ ದಿನವೇ ಎಲ್ಲರಿಗೂ ಶಾಕ್ ನೀಡಿದ್ದಾರೆ.

ಹಳ್ಳಿ ಪವರ್

'ಹಳ್ಳಿ ಪವರ್' ರಿಯಾಲಿಟಿ ಶೋನಲ್ಲಿ ರನ್ನರ್ ಅಪ್ ಆಗಿ ಜನಪ್ರಿಯತೆ ಗಳಿಸಿದ್ದ ಈ ಬೆಡಗಿ ಈಗ ಬಿಗ್ ಬಾಸ್‌ನಲ್ಲಿದ್ದಾರೆ.

ಖಡಕ್ ಆಟ

ತಾವು ನೋಡುವುದಕ್ಕೆ ಸಾಫ್ಟ್ ಆಗಿದ್ದರೂ ಆಟದ ವಿಷಯದಲ್ಲಿ ಬಹಳ ಖಾರ ಎಂದು ಮನೆ ಮಂದಿಗೆ ನೇರ ಎಚ್ಚರಿಕೆ ಕೊಟ್ಟಿದ್ದಾರೆ.

ಪ್ರಾಬಲ್ಯ ಪ್ರದರ್ಶನ

ಮನೆಗೆ ಬರ್ತಿದ್ದಂತೆ ಇಬ್ಬರು ಸ್ಪರ್ಧಿಗಳ ಸ್ಥಾನವನ್ನು ಹೈಜಾಕ್ ಮಾಡಿ ತಮ್ಮ ರಿಯಲ್ ಪವರ್ ತೋರಿಸಿದ್ದಾರೆ.

ಹಲ್‍ಚಲ್ ಭರವಸೆ

ಇವರ ತೀಕ್ಷ್ಣ ಮಾತುಗಳು ಹಾಗೂ ದಿಟ್ಟ ನಡೆಯಿಂದಾಗಿ ಮುಂದಿನ ದಿನಗಳಲ್ಲಿ ಶೋನಲ್ಲಿ ಹಲ್‍ಚಲ್ ಎೇಳುವುದು ಖಚಿತವಾಗಿದೆ.

ವೀಕ್ಷಕರ ಕುತೂಹಲ

ಪ್ರಬಲ ಸ್ಪರ್ಧಿಯಾಗಿ ಹೊರಹೊಮ್ಮುತ್ತಿರುವ ಗಾನವಿ ಅವರ ಹೊಸ ಪ್ಲಾನ್ ಮತ್ತು ಗೇಮ್‌ಪ್ಲಾನ್ ವೀಕ್ಷಕರಲ್ಲಿ ಕುತೂಹಲ ಮೂಡಿಸಿದೆ.