Pic credit - Instagram

Author: Rajesh Duggumane

24  June 2025

ಹೇಗಿದ್ದಾನೆ ನೋಡಿ ನಟಿ ಕಾಜಲ್ ಅಗರ್ವಾಲ್ ಮಗ ನೀಲ್ 

ಕಾಜಲ್ ಅಗರ್​ವಾಲ್ 

ಕಾಜಲ್ ಅಗರ್​ವಾಲ್ ಅವರು ತಮ್ಮ ಕುಟುಂಬದ ಜೊತೆ ಸಮಯ ಕಳೆದಿದ್ದಾರೆ. ಈ ಸಂದರ್ಭದ ಫೋಟೋ ವೈರಲ್ ಆಗಿ ಗಮನ ಸೆಳೆದಿದೆ. 

ವಿದೇಶದಲ್ಲಿ 

ಕಾಜಲ್ ಅವರು ತಮ್ಮ ಕುಟುಂಬದ ಜೊತೆ ವಿದೇಶದಲ್ಲಿ ಸಮಯ ಕಳೆದಿದ್ದಾರೆ. ಈ ಫೋಟೋಗಳನ್ನು ಅವರು ಹಂಚಿಕೊಂಡು ಗಮನ ಸೆಳೆದಿದ್ದಾರೆ. 

ಬೋಲ್ಡ್ ಲುಕ್ 

ಕಾಜಲ್ ಅಗರ್​ವಾಲ್ ಅವರು ಕೆಲವೊಮ್ಮೆ ಬೋಲ್ಡ್ ಲುಕ್ ಮೂಲಕ ಗಮನ ಸೆಳೆಯುವ ಕೆಲಸ ಮಾಡುತ್ತಾ ಇರುತ್ತಾರೆ. ಇದು ಅಭಿಮಾನಿಗಳಿಗೆ ಇಷ್ಟ. 

ಎಂಜಾಯ್ 

ಬೀಚ್ ಅಂದರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ. ಕಾಜಲ್​ಗೂ ಬೀಚ್ ಎಂದರೆ ಸಖತ್ ಇಷ್ಟ. ಈ ಕಾರಣಕ್ಕೆ ಬೀಚ್​ನಲ್ಲಿ ಮಲಗಿದ್ದಾರೆ. 

ಸಹೋದರಿ

ತೆಲುಗು ಫೇಮಸ್​ ನಟಿ ಕಾಜಲ್ ಜೊತೆ ಇರೋದು ಅವರ ಸಹೋದರಿ ನಿಶಾ. ಅವರು ಕೂಡ ಈ ಟ್ರಿಪ್ ನ ಭಾಗವಾಗಿದ್ದರು ಅನ್ನೋದು ವಿಶೇಷ. 

ಮಗನ ಹೆಸರು 

ಕಾಜಲ್ ಅಗರ್​ವಾಲ್ ಮಗನ ಹೆಸರು ನೀಲ್. 2022ರಲ್ಲಿ ಇವನು ಜನಿಸಿದ. ಆ ಬಳಿಕ ಕಾಜಲ್ ಮತ್ತಷ್ಟು ಖುಷಿಯಾಗಿ ಜೀವನ ನಡೆಸುತ್ತಿದ್ದಾರೆ. 

ಆ್ಯಕ್ಟೀವ್ 

ಕಾಜಲ್ ಅವರು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟೀವ್ ಆಗಿದ್ದಾರೆ. ವಿವಿಧ ರೀತಿಯ ಫೋಟೋಗಳನ್ನು ಅವರು ಹಂಚಿಕೊಳ್ಳುತ್ತಾರೆ. 

ನಟನೆ 

ಕಾಜಲ್ ಅವರು ಸಿನಿಮಾದಲ್ಲಿ ನಟನೆ ಮುಂದುವರಿಸಿದ್ದಾರೆ. ಅವರಿಗೆ ಚಿತ್ರರಂಗದಲ್ಲಿ ಸಾಕಷ್ಟು ಬೇಡಿಕೆ ಇದೆ. ಅವರು ಹಲವು ಸಿನಿಮಾಗಳನ್ನು ಮಾಡುತ್ತಿದ್ದಾರೆ.