Pic credit - Instagram

Author: Rajesh Duggumane

ಹೊಸ ವೆಂಚರ್ ಶುರು ಮಾಡಿದ ನಟಿ ಕಾವ್ಯಾ ಶೈವ 

06 Oct 2026

ಬ್ರ್ಯಾಂಡ್‌ ಆರಂಭ

ನಟಿ ಕಾವ್ಯಾ ಶೈವ ಅವರು 'ಕಾವು ಸ್ಟೈಲ್ಸ್' ಎಂಬ ಹೆಸರಿನಲ್ಲಿ ಹೊಸ ಬಟ್ಟೆ ಉದ್ಯಮವನ್ನು ಯಶಸ್ವಿಯಾಗಿ ಶುರುಮಾಡಿದ್ದಾರೆ.

ಸುಂದರ ಹೆಸರು

ಬಿಗ್ ಬಾಸ್ ಮನೆಯಲ್ಲಿದ್ದಾಗ ಪ್ರೀತಿಯಿಂದ ಗಿಲ್ಲಿ ನಟ ನೀಡಿದ್ದ 'ಕಾವು' ಎಂಬ ಬಿರುದನ್ನೇ ತಮ್ಮ ಉದ್ಯಮಕ್ಕೆ ಇಟ್ಟಿದ್ದಾರೆ.

ವಿಭಿನ್ನ ಬಟ್ಟೆಗಳು

ಈ ಹೊಸ ಉದ್ಯಮದ ಮೂಲಕ ಪ್ರೇಕ್ಷಕರಿಗೆ ಹಾಗೂ ಗ್ರಾಹಕರಿಗೆ ಅತ್ಯಂತ ವಿಭಿನ್ನ ಹಾಗೂ ಟ್ರೆಂಡಿ ಬಟ್ಟೆಗಳನ್ನು ಮಾರಾಟ ಮಾಡಲಿದ್ದಾರೆ.

ಉದ್ಯಮದ ಹೆಜ್ಜೆ

ಬಣ್ಣದ ಲೋಕದ ಅಭಿನಯದ ಜೊತೆಗೆ ಉದ್ಯಮ ರಂಗಕ್ಕೂ ಧುಮುಕಿ ನಟಿ ಕಾವ್ಯಾ ತಮ್ಮ ಹೊಸ ಪಯಣವನ್ನು ಆರಂಭಿಸಿದ್ದಾರೆ.

ಉದ್ಯಮದ ಹೆಜ್ಜೆ

ಬಣ್ಣದ ಲೋಕದ ಅಭಿನಯದ ಜೊತೆಗೆ ಉದ್ಯಮ ರಂಗಕ್ಕೂ ಧುಮುಕಿ ನಟಿ ಕಾವ್ಯಾ ತಮ್ಮ ಹೊಸ ಪಯಣವನ್ನು ಆರಂಭಿಸಿದ್ದಾರೆ.

ಶುಭಾಶಯಗಳ ಮಹಾಪೂರ

ನಟಿಯ ಈ ಹೊಸ ಬಿಸಿನೆಸ್ ಪ್ರಯತ್ನಕ್ಕೆ ಅಭಿಮಾನಿಗಳು ಹಾಗೂ ಚಿತ್ರರಂಗದ ಕಲಾವಿದರು ಹೃತ್ಪೂರ್ವಕ ಅಭಿನಂದನೆ ಮತ್ತು ಶುಭಾಶಯ ತಿಳಿಸುತ್ತಿದ್ದಾರೆ.

ಕನಸಿನ ಯೋಜನೆ

ತಮ್ಮಿಷ್ಟದ ಫ್ಯಾಷನ್ ಕ್ಷೇತ್ರದಲ್ಲಿ ಕಾಲಿಡುವ ಮೂಲಕ ತಮ್ಮ ಸುಂದರ ಕನಸನ್ನು ನಟಿ ಕಾವ್ಯಾ ಸಾಕಾರಗೊಳಿಸಿಕೊಂಡು ಮುನ್ನಡೆಯುತ್ತಿದ್ದಾರೆ.