Pic credit - Instagram

Author: Rajesh Duggumane

ಹೊಸ ಫೋಟೋ ಮೂಲಕ ಮಿಂಚಿದ ಕಾವ್ಯಾ ಶೈವ 

18 Sep 2026

ಸಾಂಪ್ರದಾಯಿಕ ಉಡುಪು

ನಟಿ ಕಾವ್ಯಾ ಶೈವ ಅವರು ಸಾಂಪ್ರದಾಯಿಕ ಉಡುಪಿನಲ್ಲಿ ಹೊಸ ಫೋಟೋಶೂಟ್ ಮಾಡಿಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಮಿಂಚುತ್ತಿದ್ದಾರೆ.   

ನೋಟ

ಮೆರೂನ್ ಹಾಗೂ ಹಸಿರು ಬಣ್ಣದ ಲಂಗದಾವಣಿಯಲ್ಲಿ ಕಾವ್ಯಾ ಅವರ ನಗುವಿನ ಅಂದ ಪ್ರೇಕ್ಷಕರ ಮನಸ್ಸನ್ನು ಗೆಲ್ಲುತ್ತಿದೆ.   

ಅಲಂಕಾರದ ವೈಭವ

ಕೂದಲಿಗೆ ಬಿಳಿ ಹೂವು ಮುಡಿದು ಕತ್ತಿನಲ್ಲಿ ಸರ ಧರಿಸಿ ಸುಂದರವಾಗಿ ಕಾವ್ಯಾ ಈ ಫೋಟೋಗಳಲ್ಲಿ ಕಂಗೊಳಿಸುತ್ತಿದ್ದಾರೆ.   

ಮನಸೆಳೆಯುವ ಪೋಸ್‌ಗಳು

ಕ್ಯಾಮೆರಾಗೆ ವಿಭಿನ್ನ ಹಾಗೂ ಆಕರ್ಷಕ ಭಂಗಿಗಳಲ್ಲಿ ಪೋಸ್ ನೀಡುವ ಮೂಲಕ ಕಾವ್ಯಾ ಎಲ್ಲರ ಗಮನ ಸೆಳೆದಿದ್ದಾರೆ.   

ಅಭಿಮಾನಿಗಳ ಶ್ಲಾಘನೆ

ಇವರ ಈ ಹೊಸ ಲುಕ್ ನೋಡಿ ಅಭಿಮಾನಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಲೈಕ್ಸ್ ಹಾಗೂ ಕಮೆಂಟ್‌ಗಳ ಸುರಿಮಳೆ ಗೈಯುತ್ತಿದ್ದಾರೆ.   

ವಿಶೇಷ ಶೈಲಿ

ದೇಶೀಯ ಉಡುಪಿನ ಶೈಲಿಯಲ್ಲಿ ಮಿಂಚುತ್ತಿರುವ ಕಾವ್ಯಾ ಅವರ ಈ ಫೋಟೋಗಳು ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿವೆ.   

ಸಿನಿಮಾ ಪ್ರಯಾಣ

ತಮ್ಮ ವಿಶಿಷ್ಟ ಅಭಿನಯ ಮತ್ತು ಸೌಂದರ್ಯದಿಂದ ಕನ್ನಡ ಚಿತ್ರರಂಗದಲ್ಲಿ ಕಾವ್ಯಾ ಶೈವ ಬೆಳೆಯುತ್ತಿರುವ ಪ್ರತಿಭೆಯಾಗಿ ಸಾಗುತ್ತಿದ್ದಾರೆ.