Pic credit - Instagram

Author: Rajesh Duggumane

ಬಾಲಿವುಡ್ ಚಿತ್ರರಂಗಕ್ಕೆ ಕಾಲಿಟ್ಟ ನಟಿ ಕೃತಿ ಶೆಟ್ಟಿ 

15 Oct 2026

ಬಾಲಿವುಡ್‌ ಪ್ರವೇಶ

ಕೃತಿ ಶೆಟ್ಟಿ ರೋಹಿತ್ ಶೆಟ್ಟಿ ನಿರ್ಮಾಣದ ‘ಹಮ್ ತೇರೆ ಪ್ಯಾರ್ ಮೇನ್’ ಚಿತ್ರದ ಮೂಲಕ ಹಿಂದಿ ಚಿತ್ರರಂಗಕ್ಕೆ ಅಧಿಕೃತವಾಗಿ ಕಾಲಿಡುತ್ತಿದ್ದಾರೆ.

ನಿರ್ದೇಶಕಿ ಪರಿಚಯ

ರೋಹಿತ್ ಶೆಟ್ಟಿ ಬಳಿ 17 ವರ್ಷಗಳ ಕಾಲ ಸಹಾಯಕ ನಿರ್ದೇಶಕಿಯಾಗಿ ಅನುಭವವಿರುವ ವಿಧಿ ಘೋಡ್ಗಾಂಕರ್ ಈ ರೊಮ್ಯಾಂಟಿಕ್ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.

ಶುರುವಾದ ಶೂಟಿಂಗ್

ರೋಹಿತ್ ಶೆಟ್ಟಿ ಮತ್ತು ಎವಿಎಸ್ ಸ್ಟುಡಿಯೋಸ್ ಜಂಟಿಯಾಗಿ ಪ್ರಸ್ತುತಪಡಿಸುತ್ತಿರುವ ಈ ಬಹುನಿರೀಕ್ಷಿತ ಚಿತ್ರದ ಚಿತ್ರೀಕರಣವು ಬುಧವಾರ ಅಧಿಕೃತವಾಗಿ ಅದ್ಧೂರಿಯಾಗಿ ಆರಂಭಗೊಂಡಿದೆ.

ಟಾಲಿವುಡ್ ಜರ್ನಿ

2021ರಲ್ಲಿ ತೆರೆಕಂಡ ‘ಉಪ್ಪೇನ’ ಚಿತ್ರದ ಮೂಲಕ ನಾಯಕಿಯಾಗಿ ಸ್ಯಾಂಡಲ್‌ವುಡ್ ಮತ್ತು ಟಾಲಿವುಡ್ ಪ್ರೇಕ್ಷಕರ ಮನ ಗೆದ್ದು ಕೃತಿ ಜನಪ್ರಿಯತೆ ಗಳಿಸಿದರು.

ಯಶಸ್ವಿ ಸಿನಿಮಾಗಳು

ಕೃತಿ ಶೆಟ್ಟಿ ಅವರು ಹಲವು ಯಶಸ್ವಿ ಸಿನಿಮಾಗಳಲ್ಲಿ ನಟಿಸಿ ಭೇಷ್ ಎನಿಸಿಕೊಂಡಿದ್ದಾರೆ. 

ಮುಂಬರುವ ಚಿತ್ರ

ಕೃತಿ ಶೆಟ್ಟಿ ಅವರು ಅನಿಲ್ ರಾವ್‌ಪುಡಿ ನಿರ್ದೇಶನದ ‘ಜನವರಿ 12 ವುದುಲಾ’ ಚಿತ್ರದಲ್ಲಿ ವೆಂಕಟೇಶ್ ಜತೆಗೆ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ದೈತ್ಯ ತಾರಾಗಣ

ಅಭಿಷೇಕ್ ಎಸ್ ವ್ಯಾಸ್ ನಿರ್ಮಾಣದ ಈ ದೊಡ್ಡ ಪ್ರಾಜೆಕ್ಟ್‌ನಲ್ಲಿ ಕೀರ್ತಿ ಸುರೇಶ್ ಮತ್ತು ಕಲ್ಯಾಣ್ ರಾಮ್ ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.