Pic credit - Instagram

Author: Rajesh Duggumane

ಕೃತಿ ಶೆಟ್ಟಿ ಖಾತೆಗೆ ಮತ್ತೊಂದು ಗೆಲುವು ಸಿಗೋದು ಫಿಕ್ಸ್?

24 June 2026

ಚಿತ್ರರಂಗದ ನಿರೀಕ್ಷೆ

 ನಟಿ ಕೃತಿ ಶೆಟ್ಟಿ ಅವರ ಖಾತೆಗೆ ಮತ್ತೊಂದು ದೊಡ್ಡ ಯಶಸ್ಸು ಸಿಗುವುದು ಈಗ ಬಹುತೇಕ ಖಚಿತ ಎನ್ನಲಾಗುತ್ತಿದೆ.

ಸ್ಟಾರ್ ಕಾಂಬಿನೇಷನ್

 ಖ್ಯಾತ ನಿರ್ದೇಶಕ ಅನಿಲ್ ರವಿಪುಡಿ ಮತ್ತು ಹಿರಿಯ ನಟ ವೆಂಕಟೇಶ್ ಜೊತೆ ಕೃತಿ ಹೊಸ ಸಿನಿಮಾ ಮಾಡುತ್ತಿದ್ದಾರೆ.

ಗೆಲುವಿನ ಲೆಕ್ಕಾಚಾರ

ಅನಿಲ್ ರವಿಪುಡಿ ಅವರ ಹಿಟ್ ಸಿನಿಮಾಗಳ ಇತಿಹಾಸ ನೋಡಿದರೆ ಈ ಚಿತ್ರದ ಗೆಲುವು ಫಿಕ್ಸ್ ಎನ್ನಲಾಗಿದೆ.

ವಿಭಿನ್ನ ಪಾತ್ರ

 ಈ ಬಹುನಿರೀಕ್ಷಿತ ಚಿತ್ರದಲ್ಲಿ ಕೃತಿ ಶೆಟ್ಟಿ ವಿಭಿನ್ನ ಹಾಗೂ ವಿಶಿಷ್ಟ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುತ್ತವೆ ಮೂಲಗಳು.

ಅಭಿಮಾನಿಗಳ ನಿರೀಕ್ಷೆ

ವೆಂಕಟೇಶ್ ಮತ್ತು ಕೃತಿ ಶೆಟ್ಟಿ ಕಾಂಬಿನೇಷನ್ ಬೆಳ್ಳಿತೆರೆಯ ಮೇಲೆ ನೋಡಲು ಅಭಿಮಾನಿಗಳು ಭಾರೀ ಕುತೂಹಲದಿಂದ ಕಾಯುತ್ತಿದ್ದಾರೆ.

ಮಹತ್ತರ ತಿರುವು

ಸತತ ಸೋಲುಗಳಿಂದ ಕಂಗೆಟ್ಟಿದ್ದ ಕೃತಿ ಶೆಟ್ಟಿ ಕೆರಿಯರ್‌ಗೆ ಈ ಸಿನಿಮಾ ದೊಡ್ಡ ಬ್ರೇಕ್ ನೀಡುವ ಸಾಧ್ಯತೆಯಿದೆ.

ಸಿನಿಮಾ ಅಪ್ಡೇಟ್

ಸದ್ಯದಲ್ಲೇ ಚಿತ್ರದ ಅಧಿಕೃತ ಪ್ರಕಟಣೆ ಹೊರಬರಲಿದ್ದು , ಈ ಕುರಿತು ದೊಡ್ಡ ಚರ್ಚೆಗಳು ಶುರುವಾಗಿವೆ.