Pic credit - Instagram

Author: Rajesh Duggumane

ಬಿಗ್ ಬಾಸ್​ಗೆ ಎಂಟ್ರಿ ಕೊಟ್ಟ ಮಹಿಳಾ ಸ್ಪರ್ಧಿಗಳು ಇವರು

29 Sep 2025

ರಕ್ಷಿತಾ ಶೆಟ್ಟಿ 

ಮಂಗಳೂರು ಮೂಲದ ರಕ್ಷಿತಾ ಶೆಟ್ಟಿ ದೊಡ್ಮನೆಗೆ ಬಂದಿದ್ದಾರೆ. ಅವರು ಮೂಲತಃ ಮುಂಬೈ ಮೂಲದವರು. 

ಮಲ್ಲಮ್ಮ 

ಮಲ್ಲಮ್ಮ ಅವರು ದೊಡ್ಮನೆಗೆ ಕಾಲಿಟ್ಟಿದ್ದಾರೆ. ಇವರು ಉತ್ತರ ಕರ್ನಾಟಕದ ಪ್ರತಿಭೆ. ಸೋಶಿಯಲ್ ಮೀಡಿಯಾ ಮೂಲಕ ಇವರು ಜನಪ್ರಿಯತೆ ಪಡೆದಿದ್ದಾರೆ. 

ಅಶ್ವಿನಿ ಗೌಡ 

25ಕ್ಕೂ ಅಧಿಕ ಧಾರಾವಾಹಿ, 100ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ ಅಶ್ವಿನಿ ಗೌಡ ಅವರು ಕನ್ನಡ ಪರ ಹೋರಾಟದಲ್ಲಿ ತೊಡಗಿಕೊಂಡಿದ್ದಾರೆ. 

ಅಶ್ವಿನಿ 

‘ಮುದ್ದು ಲಕ್ಷ್ಮೀ’ ಧಾರಾವಾಹಿಯಲ್ಲಿ ನಟಿಸಿದ ಅಶ್ವಿನಿ ಲಕ್ಷ್ಮೀ ಕೂಡ ದೊಡ್ಮನೆಯ ಭಾಗ ಆಗಿದ್ದಾರೆ. 

ಸ್ಪಂದನಾ ಸೋಮಣ್ಣ 

ಸ್ಪಂದನಾ ಸೋಮಣ್ಣ ಅವರು ಕನ್ನಡ ಹಾಗೂ ತೆಲುಗು ಧಾರಾವಾಹಿಗಳಲ್ಲಿ ನಟಿಸಿದವರು. ಅವರು ಕೂಡ  ಬಿಗ್ ಬಾಸ್​​ನಲ್ಲಿದ್ದಾರೆ. 

ಕಾವ್ಯಾ ಶೈವ 

‘ಕೆಂಡ ಸಂಪಿಗೆ’ ಧಾರಾವಾಹಿಯಲ್ಲಿ ನಟಿಸಿದ ಕಾವ್ಯಾ ಶೈವ ಅವರು ‘ಕೊತ್ತಲವಾಡಿ’ ಧಾರಾವಾಹಿಯಲ್ಲಿ ನಟಿಸಿದರು. ಅವರು ಬಿಗ್ ಬಾಸ್ ಸ್ಪರ್ಧಿ ಆಗಿದ್ದಾರೆ. 

ಮಂಜು ಭಾಷಿಣಿ 

ಮಂಜು ಭಾಷಿಣಿ ಅವರು ದೊಡ್ಮನೆ ಸೇರಿದ್ದಾರೆ. ‘ಸಿಲ್ಲಿ ಲಲ್ಲಿ’ ಧಾರಾವಾಹಿಯಲ್ಲಿ ನಟಿಸಿದ್ದರು ಮಂಜು. 

ರಾಶಿಕಾ 

‘ಮನದ ಕಡಲು’ ಸಿನಿಮಾದಲ್ಲಿ ನಟಿಸಿದ ರಾಶಿಕಾ ಅವರು ಈ ಶೋನ ಭಾಗ ಆಗಿದ್ದಾರೆ. 

ಜಾನ್ವಿ 

ಆ್ಯಂಕರ್ ಜಾನ್ವಿ ಅವರು ಬಿಗ್ ಬಾಸ್​ಗೆ ಬಂದಿದ್ದಾರೆ. ಅವರು ಯಾವ ರೀತಿ ಗಮನ ಸೆಳೆಯುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.