Pic credit - Instagram

Author: Rajesh Duggumane

1000 ಸಂಚಿಕೆ ಪೂರೈಸಿದ ‘ಲಕ್ಷ್ಮಿ ನಿವಾಸ’ ಧಾರಾವಾಹಿ

08 August 2026

ಗ್ರ್ಯಾಂಡ್ ಮೈಲಿಗಲ್ಲು

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಲಕ್ಷ್ಮಿ ನಿವಾಸ' ಧಾರಾವಾಹಿ ಯಶಸ್ವಿಯಾಗಿ ಸಾವಿರ ಸಂಚಿಕೆಗಳನ್ನು ಪೂರೈಸಿ ಸಂಭ್ರಮದಲ್ಲಿದೆ.

ಉತ್ತಮ ರೇಟಿಂಗ್

ಈ ಸುಂದರ ಕೌಟುಂಬಿಕ ಧಾರಾವಾಹಿಯು ಮೊದಲಿನಿಂದಲೂ ಟಿಆರ್‌ಪಿ ರೇಟಿಂಗ್ಸ್‌ನಲ್ಲೂ ಅತ್ಯುತ್ತಮ ಸಾಧನೆ ಮಾಡುತ್ತಾ ಮುನ್ನುಗ್ಗುತ್ತಿದೆ.

ವಿಶೇಷ ಸಂಭ್ರಮಾಚರಣೆ

ಈ ಮಹತ್ವದ ಮೈಲಿಗಲ್ಲಿನ ಸಂತಸವನ್ನು ಹಂಚಿಕೊಳ್ಳಲು ಧಾರಾವಾಹಿಯ ಇಡೀ ತಾರಾಗಣ ಒಂದೆಡೆ ಸೇರಿ ಅದ್ಧೂರಿಯಾಗಿ ಆಚರಿಸಿದೆ.

ದಿಶಾ ಪೋಸ್ಟ್

ನಟಿ ದಿಶಾ ಮದನ್ ಅವರು ಧಾರಾವಾಹಿಯ ಸಹಕಲಾವಿದರ ಜೊತೆಗಿನ ಸುಂದರ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ತಂಡದ ಸಖತ್ ಜೋಶ್

ನೆಚ್ಚಿನ ನಟ-ನಟಿಯರ ಈ ವಿಶೇಷ ಫೋಟೋಗಳು ವೈರಲ್ ಆಗಿದ್ದು, ಪ್ರೇಕ್ಷಕರಿಂದ ಶುಭ ಹಾರೈಕೆಗಳ ಸುರಿಮಳೆಯೇ ಹರಿದುಬರುತ್ತಿದೆ.

ಕುಟುಂಬದ ಪ್ರೀತಿ

ಕೌಟುಂಬಿಕ ಮೌಲ್ಯಗಳನ್ನೊಳಗೊಂಡ ಈ ಧಾರಾವಾಹಿಯ ಕಥಾಹಂದರವು ದಿನದಿಂದ ದಿನಕ್ಕೆ ಪ್ರೇಕ್ಷಕರಿಗೆ ಹೆಚ್ಚು ಹತ್ತಿರವಾಗುತ್ತಾ ಸಾಗಿದೆ.

ಅಭಿಮಾನಿಗಳ ಖುಷಿ

ಪ್ರೇಕ್ಷಕರ ನಿರಂತರ ಪ್ರೀತಿ ಮತ್ತು ಬೆಂಬಲದಿಂದಲೇ ಈ ಸಾವಿರ ಎಪಿಸೋಡ್‌ಗಳ ಯಶಸ್ವಿ ಪ್ರಯಾಣ ಸಾಧ್ಯವಾಗಿದೆ.