Pic credit - Instagram

Author: Rajesh Duggumane

ಹೊಸ ಫೋಟೋ ಮೂಲಕ ಮಿಂಚಿದ ಮಲೈಕಾ ವಾಸುಪಾಲ್ 

31 July 2026

ಊರಿನ ಹಿನ್ನೆಲೆ

ದಾವಣಗೆರೆಯ ಮಲೈಕಾ ಟಿ ವಸುಪಾಲ್ ಅವರು ಕನ್ನಡ ಕಿರುತೆರೆ ಮತ್ತು ಬೆಳ್ಳಿಪರದೆ ಎರಡರಲ್ಲೂ ಯಶಸ್ವಿಯಾಗಿ ಗುರುತಿಸಿಕೊಂಡಿದ್ದಾರೆ

ಶಿಕ್ಷಣ ವಿವರ

ಬೆಂಗಳೂರಿನ ಬಾಪೂಜಿ ಇಂಟರ್ನ್ಯಾಷನಲ್ ಸಂಸ್ಥೆಯಲ್ಲಿ ಸಿವಿಲ್ ಇಂಜಿನಿಯರಿಂಗ್ ಮುಗಿಸಿರುವ ನಟಿ ಕಲೆ ಹಾಗೂ ಕ್ರೀಡೆಯಲ್ಲಿ ಸಕ್ರಿಯರಾಗಿದ್ದರು.

ಕ್ರೀಡಾ ಆಸಕ್ತಿ

ಬಾಡ್ಮಿಂಟನ್ ಹಾಗೂ ನೃತ್ಯ ಕಲಿತಿರುವ ಇವರು ಈಜಿನಲ್ಲಿ ರಾಜ್ಯ ಮಟ್ಟದ ಪ್ರಶಸ್ತಿ ಪಡೆದ ಅತ್ಯುತ್ತಮ ಕ್ರೀಡಾಪಟು ಕೂಡ ಹೌದು.

ಕಿರುತೆರೆ ಎಂಟ್ರಿ

ಜೀ ಕನ್ನಡ ವಾಹಿನಿಯ ಹಿಟ್ಲರ್ ಕಲ್ಯಾಣ ಧಾರಾವಾಹಿಯ ಲೀಲಾ ಪಾತ್ರದ ಮೂಲಕ ಇವರು ಅಪಾರ ಜನಪ್ರಿಯತೆ ಗಳಿಸಿದರು.

ಸಿನಿಮಾ ಜರ್ನಿ

ಕಿರುತೆರೆ ಯಶಸ್ಸಿನ ನಂತರ ಉಪಾಧ್ಯಕ್ಷ, ವಿದ್ಯಾಪತಿ ಮತ್ತು ಕಲ್ಟ್ ನಂತಹ ಪ್ರಮುಖ ಚಲನಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.

ಅಭಿನಯ ಶೈಲಿ

ನೈಜ ಹಾಗೂ ಆಳವಾದ ನಟನೆಯ ಮೂಲಕ ಕನ್ನಡ ಚಿತ್ರರಂಗದಲ್ಲಿ ಭರವಸೆಯ ನಾಯಕಿಯಾಗಿ ಮಲೈಕಾ ಹೊರಹೊಮ್ಮುತ್ತಿದ್ದಾರೆ.

ವ್ಯಕ್ತಿತ್ವದ ಲಕ್ಷಣ

ಸರಳ ಸ್ವಭಾವದ ಇವರು ಸಾಂಪ್ರದಾಯಿಕ ಆಹಾರ ಇಷ್ಟಪಡುತ್ತಾ ಸದಾ ಕಲೆಯ ಕಡೆಗೆ ಹೆಚ್ಚಿನ ಒಲವು ಹೊಂದಿದ್ದಾರೆ.