Pic credit - Instagram

Author: Rajesh Duggumane

‘ಗ್ರಾಮಾಯಣ’ ಮೂಲಕ ದೊಡ್ಡ ಹಿಟ್ ಪಡೆಯಲು ರೆಡಿ ಆದ ಮೇಘಾ ಶೆಟ್ಟಿ 

27 June 2026

ಚಿತ್ರದ ಬಿಡುಗಡೆ

ನಟಿ ಮೇಘಾ ಶೆಟ್ಟಿ ಹಾಗೂ ವಿನಯ್ ರಾಜ್‌ಕುಮಾರ್ ನಟನೆಯ ‘ಗ್ರಾಮಾಯಣ’ ಸಿನಿಮಾ ಜುಲೈ 3 ರಂದು ಅದ್ಧೂರಿಯಾಗಿ ತೆರೆಗೆ ಬರುತ್ತಿದೆ.

ಮೇಘಾ ಪಾತ್ರ

ಕಿರುತೆರೆಯಿಂದ ಬೆಳ್ಳಿಪರದೆಗೆ ಬಂದ ಮೇಘಾ ಶೆಟ್ಟಿ ಈ ಚಿತ್ರದಲ್ಲಿ ಪಕ್ಕಾ ಹಳ್ಳಿ ಹುಡುಗಿಯ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಸುಂದರ ಕಥೆ

ಗ್ರಾಮೀಣ ಸೊಗಡಿನ ಈ ಕಥೆಯಲ್ಲಿ ಮೇಘಾ ಶೆಟ್ಟಿ ಅವರ ನಟನೆ ಪ್ರೇಕ್ಷಕರಿಗೆ ಹೊಸ ಅನುಭೂತಿ ನೀಡಲಿದೆ ಎಂದು ಚಿತ್ರತಂಡ ಹೇಳಿದೆ.

ನಾಯಕನ ನಟನೆ

ನಟ ವಿನಯ್ ರಾಜ್‌ಕುಮಾರ್ ಹಾಗೂ ಮೇಘಾ ಶೆಟ್ಟಿ ಜೋಡಿಯ ಕೆಮಿಸ್ಟ್ರಿ ಸಿನಿಮಾದ ಪ್ರಮುಖ ಆಕರ್ಷಣೆಯಾಗಲಿದೆ ಎಂದು ನಿರೀಕ್ಷಿಸಲಾಗಿದೆ.

ಪ್ರೇಕ್ಷಕರ ಹೈಪ್

ಈಗಾಗಲೇ ಬಿಡುಗಡೆಯಾಗಿರುವ ಹಾಡುಗಳಲ್ಲಿ ಮೇಘಾ ಅವರ ಸಾಂಪ್ರದಾಯಿಕ ಲುಕ್ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸೌಂಡ್ ಮಾಡುತ್ತಿದೆ.

ಅಭಿಮಾನಿಗಳ ಆಸೆ

ಈ ಚಿತ್ರದ ಮೂಲಕ ನಟಿ ಮೇಘಾ ಶೆಟ್ಟಿ ಸ್ಯಾಂಡಲ್‌ವುಡ್‌ನಲ್ಲಿ ದೊಡ್ಡ ಯಶಸ್ಸು ಪಡೆಯಲಿದ್ದಾರೆ ಎಂಬ ಭರವಸೆ ಅಭಿಮಾನಿಗಳಲ್ಲಿ ಮೂಡಿದೆ.

ಅಂತಿಮ ಕೌಂಟ್‌ಡೌನ್

 ಭಿನ್ನ ಕಥಾಹಂದರ ಹೊಂದಿರುವ ‘ಗ್ರಾಮಾಯಣ’ ಸಿನಿಮಾ ವೀಕ್ಷಿಸಲು ಸಿನಿಪ್ರಿಯರು ಜುಲೈ 3 ರ ದಿನಕ್ಕಾಗಿ ಸದ್ಯ ಕಾತರದಿಂದ ಕಾಯುತ್ತಿದ್ದಾರೆ.