Pic credit - Instagram

Author: Rajesh Duggumane

ಪ್ರಣಮ್ ದೇವರಾಜ್ ಎಂಗೇಜ್​ಮೆಂಟ್​ನ ಸುಂದರ ಫೋಟೋಸ್

27 August 2026

ಕುಟುಂಬದಲ್ಲಿ ಸಂಭ್ರಮ

ಕನ್ನಡ ಚಿತ್ರರಂಗದ ಖ್ಯಾತ ಡೈನಾಮಿಕ್ ಸ್ಟಾರ್ ದೇವರಾಜ್ ಅವರ ಮನೆಯಲ್ಲಿ ಮದುವೆಯ ಸಡಗರ ಹಾಗೂ ಸಂಭ್ರಮ ಕಳೆಗಟ್ಟಿದೆ.

ಪ್ರಣಮ್ ನಿಶ್ಚಿತಾರ್ಥ

ಡೈನಾಮಿಕ್ ಕುಟುಂಬದ ಕಿರಿಯ ಪುತ್ರ ನಟ ಪ್ರಣಮ್ ದೇವರಾಜ್ ಅವರ ನಿಶ್ಚಿತಾರ್ಥವು ಇತ್ತೀಚೆಗೆ ಬೆಂಗಳೂರಿನಲ್ಲಿ ಅತ್ಯಂತ ಅದ್ದೂರಿಯಾಗಿ ಜರುಗಿದೆ.

ನಮಿತಾ ಜೊತೆ

ದೀರ್ಘಕಾಲದ ಪ್ರೇಯಸಿ ನಮಿತಾ ಗೋಪಾಲ್ ಜೊತೆಗೆ ಪ್ರಣಮ್ ದೇವರಾಜ್ ಹೊಸ ಜೀವನದ ಸುಂದರ ಪಯಣಕ್ಕೆ ಶುಭ ಹೆಜ್ಜೆ ಇಟ್ಟಿದ್ದಾರೆ.

ಉಂಗುರ ಬದಲಾವಣೆ

ಕುಟುಂಬದ ಹಿರಿಯರ ಆಶೀರ್ವಾದದೊಂದಿಗೆ ಪ್ರಣಮ್ ಹಾಗೂ ನಮಿತಾ ಪರಸ್ಪರ ಉಂಗುರವನ್ನು ತೊಡಿಸಿ ಪ್ರೀತಿಯಿಂದ ಸಂಭ್ರಮ ಹಂಚಿಕೊಂಡಿದ್ದಾರೆ.

ಪ್ರಜ್ವಲ್ ಜವಾಬ್ದಾರಿ

ಸಮಾರಂಭದ ಮುಂದೆ ನಿಂತು ಅಣ್ಣ ಪ್ರಜ್ವಲ್ ದೇವರಾಜ್ ಮತ್ತು ರಾಗಿಣಿ ನಿಶ್ಚಿತಾರ್ಥದ ಪ್ರತಿಯೊಂದು ಕಾರ್ಯಕ್ರಮವನ್ನು ನಡೆಸಿಕೊಟ್ಟಿದ್ದಾರೆ.

ಆಪ್ತರ ಸಾಕ್ಷಿ

ಈ ಅದ್ಧೂರಿ ಕಾರ್ಯಕ್ರಮಕ್ಕೆ ಎರಡೂ ಕುಟುಂಬದ ಸದಸ್ಯರು ಹಾಗೂ ಚಿತ್ರರಂಗದ ಪ್ರಮುಖ ಗಣ್ಯರು ಭಾಗವಹಿಸಿ ಶುಭ ಹಾರೈಸಿದ್ದಾರೆ.

ಪ್ರೀತಿಗೆ ಸಮ್ಮತಿ

ಪರಸ್ಪರ ಪ್ರೀತಿಸುತ್ತಿದ್ದ ಈ ಜೋಡಿ ಮನೆಯವರ ಒಪ್ಪಿಗೆಯೊಂದಿಗೆ ಲವ್ ಕಮ್ ಅರೇಂಜ್ಡ್ ಮದುವೆಯಾಗಲು ಸಿದ್ಧರಾಗಿದ್ದಾರೆ.