Pic credit - Instagram

Author: Rajesh Duggumane

ಪ್ರೇಮದ ಊರಲಿ ಸಿನಿಮಾ ಎರಡು ವಾರದ ಕಲೆಕ್ಷನ್ 

07 Oct 2026

ಚಿತ್ರದ ಯಶಸ್ಸು

 ಸ್ಯಾಂಡಲ್‌ವುಡ್‌ನ 'ಪ್ರೇಮದ ಊರಲಿ' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಪ್ರೇಕ್ಷಕರಿಂದ ಭಾರಿ ಮೆಚ್ಚುಗೆ ಪಡೆದು ಯಶಸ್ವಿಯಾಗಿ ಮುನ್ನುಗ್ಗುತ್ತಿದೆ.

ಪ್ರದರ್ಶನ ಹೆಚ್ಚಳ

ದಿನದಿಂದ ದಿನಕ್ಕೆ ಪ್ರೇಕ್ಷಕರ ಸಂಖ್ಯೆ ಹೆಚ್ಚಾಗಿದ್ದು, ಚಿತ್ರದ ಪ್ರದರ್ಶನಗಳ ಸಂಖ್ಯೆಯು ಹಂತ ಹಂತವಾಗಿ ದೊಡ್ಡ ಮಟ್ಟದಲ್ಲಿ ಏರಿಕೆಯಾಗಿದೆ.

ಗಳಿಕೆ ಏರಿಕೆ

ಬಿಡುಗಡೆಯಾದ ಮೊದಲ ವಾರಕ್ಕಿಂತ ಎರಡನೇ ವಾರದಲ್ಲಿ ಈ ಚಿತ್ರವು ಅತ್ಯಧಿಕ ಪ್ರಮಾಣದ ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡಿದೆ

ಒಟ್ಟು ಕಲೆಕ್ಷನ್

ಕರ್ನಾಟಕದಲ್ಲಿ ಎರಡು ವಾರಗಳಲ್ಲಿ ಈ ಸಿನಿಮಾ ಒಟ್ಟು 33.75 ಕೋಟಿ ರೂಪಾಯಿ ಗ್ರಾಸ್ ಗಳಿಕೆಯನ್ನು ದಾಖಲಿಸಿದೆ.

ಪ್ರಚಾರದ ಶಕ್ತಿ

ಒಟ್ಟು 6,829 ಪ್ರದರ್ಶನಗಳನ್ನು ಕಂಡಿರುವ ಈ ಸಿನಿಮಾದ ದೊಡ್ಡ ಮಟ್ಟದ ಯಶಸ್ಸಿಗೆ ಮೌಖಿಕ ಪ್ರಚಾರವೇ ಪ್ರಮುಖ ಕಾರಣ.

ಸರಳ ಆರಂಭ

ಸೆಪ್ಟೆಂಬರ್ 25 ರಂದು ಕೇವಲ 60 ಶೋಗಳೊಂದಿಗೆ ಆರಂಭವಾಗಿ ಮೊದಲ ದಿನದ ಕಲೆಕ್ಷನ್ ಕೇವಲ 13 ಲಕ್ಷ ರೂಪಾಯಿ ಆಗಿತ್ತು. 5.32 ಕೋಟಿ ಗಳಿಕೆ ಮಾಡಿತ್ತು.

ರಜಾದಿನದ ಧಮಾಕಾ

ಗಾಂಧಿ ಜಯಂತಿ ಮತ್ತು ಭಾನುವಾರದ ರಜಾದಿನಗಳಲ್ಲಿ ಪ್ರತಿದಿನ ಕೋಟ್ಯಂತರ ರೂಪಾಯಿ ಕಲೆಕ್ಷನ್ ಮಾಡಿ ಅಸಲಿ ಧಮಾಕಾ ಸೃಷ್ಟಿಸಿತು.

rami