Pic credit - Instagram

Author: Rajesh Duggumane

ವಿವಾದದ ಬಳಿಕ ಪತಿಗೆ ರಾಗಿಣಿ ಪ್ರಜ್ವಲ್ ಸ್ವೀಟ್ ವಿಶ್ 

08 July 2026

ಸಂಭಾವನೆ ಕಿರಿಕ್

'ಕರಾವಳಿ' ಚಿತ್ರದ ಟ್ರೇಲರ್ ಲಾಂಚ್ ಕಾರ್ಯಕ್ರಮಕ್ಕೆ ನಟ ಪ್ರಜ್ವಲ್ ದೇವರಾಜ್ ಗೈರಾಗಿದ್ದು, ಸಂಭಾವನೆ ವಿಷಯದ ವಿವಾದಕ್ಕೆ ಕಾರಣವಾಗಿದೆ.

ಪತ್ನಿ ಸಾಥ್

ವಿವಾದದ ನಡುವೆಯೇ ಪ್ರಜ್ವಲ್ ದೇವರಾಜ್ ಅವರ ಪತ್ನಿ ರಾಗಿಣಿ ಪ್ರಜ್ವಲ್ ಪತಿಗೆ ಜನ್ಮದಿನದ ವಿಶೇಷ ಶುಭಕೋರಿ ಬೆಂಬಲವಾಗಿ ನಿಂತಿದ್ದಾರೆ.

ಪತಿಯ ಗುಣಗಾನ

‘ಸುತ್ತಲಿರುವ ಎಲ್ಲರಿಗೂ ಒಳ್ಳೆಯದನ್ನೇ ಬಯಸುವ ಮತ್ತು ನನ್ನನ್ನು ರಾಜಕುಮಾರಿಯಂತೆ ನೋಡಿಕೊಳ್ಳುವ ಪತಿ ನೀನು’ ಎಂದು ರಾಗಿಣಿ ಬರೆದುಕೊಂಡಿದ್ದಾರೆ

ಅಪ್ರತಿಮ ನಟ

‘ಎರಡು ದಶಕಗಳಿಂದ ಚಿತ್ರರಂಗಕ್ಕೆ ಮತ್ತು ಅಭಿಮಾನಿಗಳಿಗೆ ತಮ್ಮ ಅತ್ಯುತ್ತಮ ನಟನೆಯನ್ನು ಪ್ರಜ್ವಲ್ ನೀಡುತ್ತಾ ಬಂದಿದ್ದಾರೆ’ ಎಂದು ಪತ್ನಿ ಶ್ಲಾಘಿಸಿದ್ದಾರೆ.

ಸರಳತೆಯ ಶಕ್ತಿ

‘ನಿಮ್ಮಲ್ಲಿರುವ ನಮ್ರತೆ, ಎಲ್ಲರಿಗೂ ನೀಡುವ ಗೌರವ ಹಾಗೂ ನಿಸ್ವಾರ್ಥ ಗುಣವೇ ನಿಮ್ಮ ಬದುಕಿನ ಅತಿ ದೊಡ್ಡ ಶಕ್ತಿಯಾಗಿದೆ’ ಎಂದಿದ್ದಾರೆ.

ಹೆಮ್ಮೆಯ ಪತ್ನಿ

‘ಚಿತ್ರರಂಗವನ್ನು ಹಾಗೂ ಪ್ರೀತಿಸುವವರನ್ನು ನೂರಕ್ಕೆ ನೂರರಷ್ಟು ಗೌರವಿಸುವ ನಿಮ್ಮ ವ್ಯಕ್ತಿತ್ವ ನಮಗೆ ಸದಾ ಹೆಮ್ಮೆ ತರುತ್ತದೆ’ ಎಂದು ಹೊಗಳಿದ್ದಾರೆ.

ಪ್ರತಿಭಾವಂತ ನೃತ್ಯಗಾರ್ತಿ

ವೃತ್ತಿಪರ ಡ್ಯಾನ್ಸರ್ ಆಗಿರುವ ರಾಗಿಣಿ ಅವರು ಕಷ್ಟದ ಸಮಯದಲ್ಲಿ ಪತಿಯ ಪರ ನಿಂತು ಧೈರ್ಯ ತುಂಬಿರುವುದು ಗಮನಾರ್ಹವಾಗಿದೆ.