Pic credit - Instagram

Author: Rajesh Duggumane

ನಟಿ ರಮಿಕಾ ಶಿವುಗೆ ಚಿ್ತ್ರರಂಗದಲ್ಲಿ ಹೆಚ್ಚಿತು ಬೇಡಿಕೆ 

07 Oct 2026

ಆರಂಭಿಕ ಹೆಜ್ಜೆ

ಕಿರುತೆರೆಯ 'ಪಾರು' ಮತ್ತು 'ನೀನಾದೆ ನಾ' ಧಾರಾವಾಹಿಗಳ ಮೂಲಕ ರಮಿಕಾ ಶಿವು ತಮ್ಮ ಬಣ್ಣದ ಪಯಣವನ್ನು ಮೊದಲಿಗೆ ಆರಂಭಿಸಿದರು.

ಚಿತ್ರದ ಆಯ್ಕೆ

ಹಿರಿತೆರೆಯತ್ತ ಹೆಜ್ಜೆ ಇಡಲು ಕಾಯುತ್ತಿದ್ದ ಅವರು ಕಥೆಯ ಗಾಂಭೀರ್ಯತೆ ಮೆಚ್ಚಿ ‘ಪ್ರೇಮದ ಊರಲಿ’ ಚಿತ್ರಕ್ಕೆ ಒಪ್ಪಿಗೆ ನೀಡಿದರು.

ಸವಾಲಿನ ಪಾತ್ರ

ಈ ಸಿನಿಮಾದಲ್ಲಿ ನಾಲ್ಕು ವಿಭಿನ್ನ ಶೇಡ್ ಹೊಂದಿರುವ 'ವಸಂತಾ' ಎಂಬ ಶಕ್ತಿಶಾಲಿ ಹಾಗೂ ಅತ್ಯಂತ ಚಾಲೆಂಜಿಂಗ್ ಪಾತ್ರಕ್ಕೆ ಜೀವತುಂಬಿದರು.

ವಿಶಿಷ್ಟ ಪ್ರಚಾರ

ಚಿತ್ರತಂಡದ ಜೊತೆ ಸೇರಿ ಬಿಎಂಟಿಸಿ ಬಸ್ ಹಾಗೂ ಟ್ರೇನ್‌ಗಳಲ್ಲಿ ಸಂಚರಿಸಿ ಜನರನ್ನು ನೇರವಾಗಿ ಭೇಟಿಯಾಗಿ ವಿಭಿನ್ನವಾಗಿ ಪ್ರಚಾರ ಮಾಡಿದರು.

ಪ್ರೇಕ್ಷಕರ ಪ್ರೀತಿ

ತಮ್ಮ ಸಹಜ ನಟನೆಯಿಂದ ವೀಕ್ಷಕರ ಮನಗೆದ್ದು, ಸಾರ್ವಜನಿಕರಿಂದ ಡಬಲ್ ಪ್ರೀತಿ ಮತ್ತು ಬೆಂಬಲ ಪಡೆಯುವಲ್ಲಿ ನಟಿ ಯಶಸ್ವಿಯಾದರು.

ದೊಡ್ಡ ಗೆಲುವು

ಮೊದಲ ಸಿನಿಮಾದಲ್ಲೇ ಭರ್ಜರಿ ಯಶಸ್ಸು ಕಾಣುವ ಮೂಲಕ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಬಲವಾದ ಅಡಿಪಾಯವನ್ನು ನಿರ್ಮಿಸಿಕೊಂಡಿದ್ದಾರೆ.

ಮುಂದಿನ ಹಾದಿ

ಸಿಕ್ಕ ಯಶಸ್ಸಿನಿಂದ ಜವಾಬ್ದಾರಿ ಹೆಚ್ಚಿಸಿಕೊಂಡು, ಮುಂದೆಯೂ ತೂಕವಿರುವ ಉತ್ತಮ ಕಥೆಗಳನ್ನಷ್ಟೇ ಆಯ್ಕೆ ಮಾಡಿಕೊಳ್ಳುವ ನಿಶ್ಚಯದಲ್ಲಿದ್ದಾರೆ.