Pic credit - Instagram

Author: Rajesh Duggumane

‘ಪ್ರೇಮದ ಊರಲಿ’ ಸಿನಿಮಾ ಈಗ ಒಟಿಟಿಗೆ 

17 Nov 2026

ಸೈಲೆಂಟ್ ಎಂಟ್ರ

ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಯಶಸ್ಸು ಕಂಡಿದ್ದ ‘ಪ್ರೇಮದ ಊರಲಿ’ ಸಿನಿಮಾ ಈಗ ಸದ್ದಿಲ್ಲದೆ ಒಟಿಟಿ ವೇದಿಕೆಗೆ ಲಗ್ಗೆ ಇಟ್ಟಿದೆ.

50 ದಿನಗಳ ಸಂಭ್ರಮ

ಇತ್ತೀಚೆಗಷ್ಟೇ ಚಿತ್ರಮಂದಿರಗಳಲ್ಲಿ ಯಶಸ್ವಿ 50 ದಿನ ಪೂರೈಸಿದ ಈ ಚಿತ್ರ, ಯಾವುದೇ ಪ್ರಚಾರವಿಲ್ಲದೆ ಡಿಜಿಟಲ್ ಲೋಕಕ್ಕೆ ಕಾಲಿಟ್ಟಿದೆ.

ಥಿಯೇಟರ್ ರನ್

ಸದ್ಯ ಚಿತ್ರಮಂದಿರಗಳಲ್ಲಿ ಇನ್ನೂ ಉತ್ತಮ ಪ್ರದರ್ಶನ ಕಾಣುತ್ತಿರುವುದರಿಂದ, ಥಿಯೇಟರ್ ಕಲೆಕ್ಷನ್‌ಗೆ ಧಕ್ಕೆಯಾಗದಂತೆ ಸೈಲೆಂಟ್ ಆಗಿ ಒಟಿಟಿಗೆ ತರಲಾಗಿದೆ.

ಬಾಕ್ಸ್ ಆಫೀಸ್ ದಾಖಲೆ

ಕೇವಲ 2-3 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾಗಿದ್ದ ಈ ಸಿನಿಮಾ ವಿಶ್ವದಾದ್ಯಂತ 130 ಕೋಟಿ ರೂಪಾಯಿಗೂ ಅಧಿಕ ಗಳಿಸಿದೆ.

ಮುಂದುವರಿದ ಅಬ್ಬರ

ಬಿಡುಗಡೆಯಾಗಿ 50 ದಿನಗಳು ಕಳೆದಿದ್ದರೂ ಕೂಡ ಈ ಸಿನಿಮಾ ಈಗಲೂ ಪ್ರತಿದಿನ ಲಕ್ಷಾಂತರ ರೂಪಾಯಿ ಕಲೆಕ್ಷನ್ ಮಾಡುತ್ತಿದೆ.

ಮನೆಮಂದಿಗೆ ಮನರಂಜನೆ

ಥಿಯೇಟರ್‌ನಲ್ಲಿ ಸಿನಿಮಾ ಮಿಸ್ ಮಾಡಿಕೊಂಡವರು ಹಾಗೂ ಮೆಚ್ಚಿಕೊಂಡವರು ಈಗ ಮತ್ತೊಮ್ಮೆ ಕುಟುಂಬದವರ ಜೊತೆ ಕುಳಿತು ನೋಡಬಹುದು.

ಅಮೇಜಾನ್ ಪ್ರೈಮ್

‘ಪ್ರೇಮದ ಊರಲಿ’ ಸಿನಿಮಾ ಇಂದಿನಿಂದ ಅಂದರೆ ನವೆಂಬರ್ 17ರಿಂದ ಜನಪ್ರಿಯ ಅಮೇಜಾನ್ ಪ್ರೈಮ್ ವಿಡಿಯೋದಲ್ಲಿ ವೀಕ್ಷಣೆಗೆ ಲಭ್ಯವಿದೆ.