Pic credit - Instagram

Author: Rajesh Duggumane

27 June 2025

ರಶ್ಮಿಕಾ ಅಂದ್ರೆ ಫ್ಲವರ್ ಅಂದ್ಕೊಂಡ್ಯಾ? ಅಲ್ಲ ಫೈಯರ್  

ಹೊಸ ಸಿನಿಮಾ 

ರಶ್ಮಿಕಾ ಮಂದಣ್ಣ ಅವರು ಹೊಸ ಸಿನಿಮಾ ಅನೌನ್ಸ್ ಮಾಡಿದ್ದಾರೆ. ಈ ಚಿತ್ರದಲ್ಲಿ ಅವರು ರಗಡ್ ಲುಕ್​ನಲ್ಲಿ ಕಾಣಿಸಿಕೊಂಡು ಗಮನ ಸೆಳೆದಿದ್ದಾರೆ. 

ಪುಷ್ಪದಲ್ಲಿ ಫ್ಲವರ್ 

ರಶ್ಮಿಕಾ ಅವರು ‘ಪುಷ್ಪ’ ಚಿತ್ರದಲ್ಲಿ ಡಿ ಗ್ಲಾಮ್ ಲುಕ್​ನ ಪಾತ್ರ ಮಾಡಿದ್ದರು. ಪುಷ್ಪನ ಪತ್ನಿ ಶ್ರೀವಲ್ಲಿ ಪಾತ್ರದಲ್ಲಿ ಅವರು ಕಾಣಿಸಿಕೊಂಡಿದ್ದರು. 

ಈಗ ಫೈಯರ್ 

‘ಪುಷ್ಪ’ ಚಿತ್ರದಲ್ಲಿ ಫ್ಲವರ್ ರೀತಿ ಇದ್ದ ಅವರು ಈಗ ‘ಮೈಸಾ’ ಚಿತ್ರದಲ್ಲಿ ಫೈಯರ್ ಆಗಿದ್ದಾರೆ. ಅವರ ಲುಕ್ ಭಯ ಬೀಳಿಸುವಂತಿದೆ. 

ರಗಡ್ ಲುಕ್ 

ರಶ್ಮಿಕಾ ಮಂದಣ್ಣ ಅವರ ರಗಡ್ ಅವತಾರ ಎಲ್ಲರನ್ನೂ ಬೆಚ್ಚಿ ಬೀಳಿಸಿದೆ. ಈ ರೀತಿಯ ಪಾತ್ರಕ್ಕಾಗಿ ಅವರು ಮೊದಲಿನಿಂದಲೂ ಕಾಯುತ್ತಾ ಇದ್ದರು. 

ಮಹಿಳಾ ಪ್ರಧಾನ 

ರಶ್ಮಿಕಾ ಅವರದ್ದು ಮಹಿಳಾ ಪ್ರಧಾನ ಪಾತ್ರ. ಅವರ ಪಾತ್ರ ಗಮನ ಸೆಳೆಯುವ ರೀತಿಯಲ್ಲಿ ಇದೆ. ಅವರ ಬೇಡಿಕೆ ದಿನ ಕಳೆದಂತೆ ಹೆಚ್ಚುತ್ತಿದೆ. 

ಹೆಚ್ಚಿದ ಬೇಡಿಕೆ

ರಶ್ಮಿಕಾ ಮಂದಣ್ಣ ಅವರು ಕಳೆದ ಕೆಲ ವರ್ಷಗಳಲ್ಲಿ ಬೇಡಿಕೆ ಹೆಚ್ಚಿಸಿಕೊಂಡಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಅವರು ಗುರುತಿಸಿಕೊಂಡಿದ್ದಾರೆ. 

ಮತ್ತೊಂದು ಅನುಷ್ಕಾ? 

ಈ ಮೊದಲು ಅನುಷ್ಕಾ ಶೆಟ್ಟಿ ಅವರು ಈ ರೀತಿಯ ಪಾತ್ರಗಳನ್ನು ಮಾಡುತ್ತಿದ್ದರು. ಈಗ ರಶ್ಮಿಕಾ ಅವರು ಅದೇ ರೀತಿಯ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. 

ಕುಬೇರ 

ಇತ್ತೀಚೆಗೆ ರಿಲೀಸ್ ಆದ ‘ಕುಬೇರ’ ಸಿನಿಮಾ ಮೂಲಕ ರಶ್ಮಿಕಾ ಮಂದಣ್ಣ ಅವರು ಭರ್ಜರಿ ಜನಪ್ರಿಯತೆಯನ್ನು ಪಡೆದುಕೊಂಡಿದ್ದಾರೆ.