Pic credit - Instagram

Author: Rajesh Duggumane

‘ಮೈಸಾ’ ಚಿತ್ರಕ್ಕಾಗಿ 20 ಗಂಟೆ ನೀರಲ್ಲಿ ಶೂಟ್ ಮಾಡಿದ ರಶ್ಮಿಕಾ ಮಂದಣ್ಣ 

10 July 2026

ಹೊಸ ಸಾಹಸ

ನಟಿ ರಶ್ಮಿಕಾ ಮಂದಣ್ಣ ತಮ್ಮ ಮುಂಬರುವ 'ಮೈಸಾ' ಚಿತ್ರಕ್ಕಾಗಿ ಭರ್ಜರಿ ಆ್ಯಕ್ಷನ್ ಸೀನ್ ಒಂದರಲ್ಲಿ ನಟಿಸಿದ್ದಾರೆ.

ಅಂಡರ್ ವಾಟರ್

ಭಾರತೀಯ ಚಿತ್ರರಂಗದಲ್ಲೇ ಮೊದಲ ಬಾರಿಗೆ ಮಹಿಳಾ ಪ್ರಧಾನ ಸಿನಿಮಾದಲ್ಲಿ ನೀರಿನ ಅಡಿಯಲ್ಲಿ ಫೈಟಿಂಗ್ ಮಾಡಲಾಗಿದೆ.

ಬಾಡಿ ಡಬಲ್

ಈ ಅತ್ಯಂತ ಕಠಿಣ ಸಾಹಸ ದೃಶ್ಯದಲ್ಲಿ ರಶ್ಮಿಕಾ ಯಾವುದೇ ಡೂಪ್ ಬಳಸದೆ ಸ್ವತಃ ತಾವೇ ನಟಿಸಿದ್ದಾರೆ.

ಕಠಿಣ ಶ್ರಮ

ಶೂಟಿಂಗ್ ಪೂರ್ತಿಗೊಳಿಸಲು ರಶ್ಮಿಕಾ ಸತತ ಎರಡು ದಿನಗಳ ಕಾಲ ನೀರಿನಲ್ಲಿಯೇ ಕಾಲ ಕಳೆಯಬೇಕಾಗಿ ಬಂದಿತ್ತು.

ಸತತ ಶೂಟಿಂಗ್

 ಅವರು ಒಟ್ಟು ಸುಮಾರು ಇಪ್ಪತ್ತು ಗಂಟೆಗಳ ಕಾಲ ನೀರಿನ ಆಳದಲ್ಲೇ ಇದ್ದು ಸಾಹಸ ದೃಶ್ಯ ಮುಗಿಸಿದ್ದಾರೆ.

ವೃತ್ತಿಜೀವನದ ಸವಾಲು

ಇದು ತಮ್ಮ ಇಡೀ ಸಿನಿ ಜರ್ನಿಯಲ್ಲಿ ಎದುರಿಸಿದ ಅತ್ಯಂತ ದೊಡ್ಡ ಮತ್ತು ಕಠಿಣ ಸವಾಲು ಎಂದು ರಶ್ಮಿಕಾ ಹೇಳಿದ್ದಾರೆ.

ಸಿನಿಮಾ ಬಿಡುಗಡೆ

ಬುಡಕಟ್ಟು ಜನಾಂಗದ ಹಿನ್ನೆಲೆಯ ಈ ಎಮೋಷನಲ್ ಆಕ್ಷನ್ ಥ್ರಿಲ್ಲರ್ ಸಿನಿಮಾ 2026 ರಲ್ಲಿ ತೆರೆಗೆ ಬರಲಿದೆ.