Pic credit - Instagram

Author: Rajesh Duggumane

23 July 2025

ರಶ್ಮಿಕಾ ಮಂದಣ್ಣ ಮಾರಾಟಕ್ಕಿಟ್ಟ ಪರ್ಫ್ಯೂಮ್ ಎಷ್ಟೊಂದು ದುಬಾರಿ 

ರಶ್ಮಿಕಾ ಮಂದಣ್ಣ 

ರಶ್ಮಿಕಾ ಮಂದಣ್ಣ ಅವರು ಪರ್ಫ್ಯೂಮ್ ಬ್ರ್ಯಾಂಡ್  ಒಂದನ್ನು ಆರಂಭಿಸಿದ್ದಾರೆ. ಇತ್ತೀಚೆಗೆ ಇದರ ಲಾಂಚ್ ಆಗಿದೆ. 

ಹೆಸರೇನು?

ರಶ್ಮಿಕಾ ಮಂದಣ್ಣ ಆರಂಭಿಸಿದ ಪರ್ಫ್ಯೂಮ್ ಕಂಪನಿಯ ಹೆಸರು ‘ಡಿಯರ್ ಡೈರಿ’ ಎಂದು. 

ತುಂಬಾನೇ ದುಬಾರಿ

ರಶ್ಮಿಕಾ ಮಂದಣ್ಣ ಅವರ ಪರ್ಫ್ಯೂಮ್ ತುಂಬಾನೇ ದುಬಾರಿ ಎಂದು ಅವರ ಅಭಿಮಾನಿಗಳು ಹೇಳಿದ್ದಾರೆ. 

ಬೆಲೆ ಎಷ್ಟು? 

100 ಎಂಎಲ್ ಪರ್ಫ್ಯೂಮ್​ಗೆ ರಶ್ಮಿಕಾ ಮಂದಣ್ಣ ಅವರು ಬರೋಬ್ಬರಿ 2,599 ರೂಪಾಯಿ ಚಾರ್ಜ್ ಮಾಡುತ್ತಾರೆ. 

ಬಿರುದುಗಳೇ ಹೆಸರಾದಾಗ 

ಪ್ರತಿ ಪರ್ಫ್ಯೂಮ್​ಗೂ ರಶ್ಮಿಕಾ ವಿವಿಧ ಹೆಸರು ಇಟ್ಟಿದ್ದಾರೆ. ಅವೆಲ್ಲವೂ ಅವರಿಗೆ ಸಿಕ್ಕ ಬಿರುದುಗಳು. 

ಉದಾಹರಣೆಗೆ.. 

ನ್ಯಾಷನಲ್ ಕ್ರಶ್, ಇರಿಪ್ಲೇಸೆಬಲ್, ಕಾಂಟ್ರವರ್ಶಿಯಲ್ ಹೀಗೆ ಹೆಸರನ್ನು ಅವರು ಆಯ್ಕೆ ಮಾಡಿದ್ದಾರೆ. 

ಇನ್​ಕಮ್​ಗೆ ದಾರಿ 

ಈಗುನಿಂದ ಉದ್ಯಮ ಆರಂಭಿಸಿದರೆ ಚಿತ್ರರಂಗ ತೊರೆಯುವಾಗ ಒಂದು ಗಟ್ಟಿ ನೆಲೆ ಆಗುತ್ತದೆ ಎಂಬುದು ರಶ್ಮಿಕಾ ಅಭಿಪ್ರಾಯ. 

ಸಿನಿಮಾ ಕೆಲಸ 

ಸಿನಿಮಾ ಕೆಲಸಗಳನ್ನು ರಶ್ಮಿಕಾ ಮಂದುವರಿಸಿಕೊಂಡು ಹೋಗುತ್ತಿದ್ದಾರೆ. ಅವರ ಬೇಡಿಕೆ ಹೆಚ್ಚುತ್ತಲೇ ಇದೆ.