Pic credit - Instagram

Author: Rajesh Duggumane

16 July 2025

ವೈಷ್ಣವಿ ಗೌಡ ತಾಳಿ ಏಕೆ ಹಾಕಲ್ಲ? ಸ್ಪಷ್ಟನೆ ನೀಡಿದ ನಟಿ 

ವಿವಾಹ

ವೈಷ್ಣವಿ ಗೌಡ ಅವರು ಇತ್ತೀಚೆಗೆ ವಿವಾಹ ಆಗಿದ್ದಾರೆ. ಅವರು ಅನುಕೂಲ್ ಮಿಶ್ರಾ ಜೊತೆ ಸಪ್ತಪದಿ ತುಳಿದು ಹೊಸ ಬಾಳು ಆರಂಭಿಸಿದ್ದಾರೆ. 

ಸಂಪ್ರದಾಯ..

ವಿವಾಹ ಆದ ಬಳಿಕ ವೈಷ್ಣವಿ ಗೌಡ ಅವರು ಎಲ್ಲಾ ಸಂಪ್ರದಾಯವನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಾ ಬರುತ್ತಾ ಇದ್ದಾರೆ. 

ತಾಳಿ ಮಾತ್ರ ಇಲ್ಲ

ವೈಷ್ಣವಿ ಗೌಡ ಅವರ ಫೋಟೋಶೂಟ್​ನಲ್ಲಿ ತಾಳಿ ಮಾತ್ರ ಕಾಣಿಸುತ್ತಾ ಇರಲಿಲ್ಲ. ಇದಕ್ಕೆ ಕಾರಣ ಏನು ಎಂಬುದನ್ನು ಅವರು ರಿವೀಲ್ ಮಾಡಿದ್ದಾರೆ. 

ಪ್ರಶ್ನೆ ಹಾಗೂ ಟ್ರೋಲ್ 

ವೈಷ್ಣವಿ ಗೌಡ ಅವರು ತಾಳಿ ಹಾಕಲ್ಲ ಎಂಬುದನ್ನು ಅನೇಕರು ಪ್ರಶ್ನೆ ಮಾಡಿದ್ದರು. ಕೆಲವರು ಇದನ್ನು ಟ್ರೋಲ್ ಕೂಡ ಮಾಡಿದ್ದರು. 

ಉತ್ತರ 

ವೈಷ್ಣವಿ ಗೌಡ ಅವರು ಈ ಪ್ರಶ್ನೆಗೆ ಉತ್ತರ ನೀಡಿದ್ದಾರೆ. ಅವರು ಸ್ಪಷ್ಟ ಮಾತುಗಳಲ್ಲಿ ಎಲ್ಲವನ್ನೂ ಹೇಳುವ ಪ್ರಯತ್ನ ಮಾಡಿದ್ದಾರೆ. 

ಸಂಪ್ರದಾಯವೇ ಇಲ್ಲ..

‘ಮದುವೆ ಬಳಿಕ ನಾನು ಪತಿಯ ಕುಟುಂಬದ ಸಂಪ್ರದಾಯ ಫಾಲೋ ಮಾಡುತ್ತಿದ್ದೇನೆ. ಇಲ್ಲಿ ತಾಳಿ ಹಾಕುವ ಸಂಪ್ರದಾಯ ಇಲ್ಲ ಎಂದು’ ಹೇಳಿದ್ದಾರೆ. 

ಅತ್ತೆಯೂ ಹಾಕಲ್ಲ.. 

‘ಅವರ ಪದ್ಧತಿಯಲ್ಲಿ ತಾಳಿ ಇಲ್ಲ. ನನ್ನ ಅತ್ತೆ ತಾಳಿ ಹಾಕಿಲ್ಲ. ಕಿವಿಗೆ ಮೂಗು ಚುಚ್ಚಿರಬೇಕು. ಬಳೆ ಹಾಕಬೇಕು, ಕಾಲುಂಗರ ಹಾಕಬೇಕಿತ್ತು. ಅದನ್ನು ಹಾಕಿದ್ದೇನೆ’ ಎಂದಿದ್ದಾರೆ ಅವರು. 

ಸಂತೋಷ 

ಈ ಸ್ಪಷ್ಟನೆಯಿಂದ ಅಭಿಮಾನಿಗಳು ಖುಷಿಪಟ್ಟಿದ್ದಾರೆ. ಅವರು ಸಂಪ್ರದಾಯ ಹಾಗೂ ಪದ್ಧತಿ ಫಾಲೋ ಮಾಡುತ್ತಿದ್ದಾರೆ ಎಂಬುದು ತಿಳಿದು ಖುಷಿ ಆಗಿದ್ದಾರೆ.