ದಾಂಪತ್ಯದ ಬಗ್ಗೆ ವದಂತಿ ಹಬ್ಬಿಸಿದವರಿಗೆ ಚಳಿ ಬಿಡಿಸಿದ ಚೈತ್ರಾ
ಚೈತ್ರಾ ಕುಂದಾಪುರ
ಚೈತ್ರಾ ಕುಂದಾಪುರ ಅವರು ನಿರಂತರವಾಗಿ ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿ ಆಗುತ್ತಲೇ ಇರುತ್ತಾರೆ. ಅವರ ಹೆಸರು ಸದಾ ಚರ್ಚೆಯಲ್ಲಿರುತ್ತದೆ.
ವಿವಾಹ
ಚೈತ್ರಾ ಕುಂದಾಪುರ ಅವರು ಇತ್ತೀಚೆಗಷ್ಟೇ ವಿವಾಹ ಆಗಿದ್ದಾರೆ. ಅವರ ದಾಂಪತ್ಯ ಸುಖವಾಗಿ ಸಾಗುತ್ತಾ ಇದೆ. ಶ್ರೀಕಾಂತ್ ಎಂಬುದು ಅವರ ಪತಿಯ ಹೆಸರು.
ಎಲ್ಲರ ಸಮ್ಮುಖ
ಆಪ್ತರು ಹಾಗೂ ಕುಟುಂಬದವರ ಸಮ್ಮುಖದಲ್ಲಿ ಚೈತ್ರಾ ಅವರು ವಿವಾಹ ಆಗಿದ್ದಾರೆ. ಎಲ್ಲರೂ ಬಂದು ಅವರನ್ನು ಹಾರೈಸಿದ್ದಾರೆ.
ಸಿಹಿ ಸುದ್ದಿ
ಮದುವೆಯಾದ ಕೆಲವೇ ತಿಂಗಳಲ್ಲಿ ಚೈತ್ರಾ ಸಿಹಿ ಸುದ್ದಿ ನೀಡಿದ್ದಾರೆ ಎನ್ನುವ ಸುದ್ದಿಯನ್ನು ಹಬ್ಬಿಸಲಾಗಿತ್ತು.
ಚೈತ್ರಾ ಉತ್ತರ ಏನು?|
ಕ್ಲಿಕ್ ಬೈಟ್ ಆಸೆಗೆ ಕಂಡವರ ಮನೆಯ ಖಾಸಗಿ ವಿಷಯಗಳ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುವ ಇಂತಹ ಲೋ ಕ್ಲಾಸ್ ವೆಬ್ ನ್ಯೂಸ್ಗಳ ಮೇಲೆ ಕಠಿಣ ಕ್ರಮ ಕೈಗೊಳ್ಳುವ ಕಾನೂನು ಬರಬೇಕಿದೆ ಎಂದಿದ್ದಾರೆ.
ವ್ಯವಸ್ಥೆಯೂ ಯೋಚಿಸಲಿ
‘ಮುಖ ತೋರಿಸದೆ ಸುಳ್ಳು ಹಬ್ಬಿಸುವ ಯೂಟ್ಯೂಬ್ ಚಾನೆಲ್ ಗಳಿಗೆ ಕಡಿವಾಣ ಹಾಕಲು ಸ್ವತಃ ಯೂಟ್ಯೂಬ್ ಮುಂದಾಗಿತ್ತು. ವ್ಯವಸ್ಥೆ ಕೂಡ ಆ ದಿಕ್ಕಿನಲ್ಲಿ ಯೋಚಿಸಬೇಕಿದೆ’ ಎಂದಿದ್ದಾರೆ ಅವರು.
ಮಾನ್ಯತೆ ಇಲ್ಲದ ಸೈಟ್ಗಳು
ಕೆಲ ಮಾನ್ಯತೆ ಇಲ್ಲದೆ ಇರುವ ವೆಬ್ ಸೈಟ್ಗಳು ಈ ರೀತಿಯ ಕೆಲಸ ಮಾಡುತ್ತಿವೆ. ಇದು ಅವರ ಬೇಸರಕ್ಕೆ ಕಾರಣ ಆಗಿದೆ.
ರಿಯಾಲಿಟಿ ಶೋ
ಚೈತ್ರಾ ಕುಂದಾಪುರ ಬಗ್ಗೆ ನೆಗೆಟಿವ್ ಟಾಕ್ ಇತ್ತು. ಬಿಗ್ ಬಾಸ್ನಲ್ಲಿ ಭಾಗವಹಿಸಿದ ಬಳಿಕ ಅದು ಸಂಪೂರ್ಣವಾಗಿ ಬದಲಾಗಿದೆ.