Pic credit - Instagram

Author: Rajesh Duggumane

14 July 2025

ಚಿತ್ರರಂಗವೇ ಸರೋಜಾ ದೇವಿ ಹುಡುಕಿ ಬಂದಾಗ

ಸರೋಜಾ ದೇವಿ

ಸರೋಜಾ ದೇವಿ ಅವರು 83ನೇ ವಯಸ್ಸಿಗೆ ನಿಧನ ಹೊಂದಿದರು. ಅವರು ಚಿತ್ರರಂಗದಲ್ಲಿ ಸಾಕಷ್ಟು ಯಶಸ್ಸು ಕಂಡಿದ್ದರು. 

ನಟಿಗೆ ಏನಾಗಿತ್ತು?

ಸರೋಜಾ ದೇವಿ ಅವರಿಗೆ ವಯೋ ಸಹಜ ಕಾಯಿಲೆ ಇತ್ತು. ಅವರು ಇಂದು ಏಕಾಏಕಿ ತಲೆಸುತ್ತಿ ಬಿದ್ದರು ಮತ್ತು ಅವರನ್ನು ಆಸ್ಪತ್ರೆಗೆ ಸೇರಿಸಲಾಯಿತು. 

ನಿಧನ 

ಸರೋಜಾ ದೇವಿ ಅವರು ಆಸ್ಪತ್ರೆಯಲ್ಲೇ ನಿಧನ ಹೊಂದಿದರು. ಅವರು ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ. 

ಚಿತ್ರರಂಗ 

ಸಣ್ಣ ವಯಸ್ಸಿನಲ್ಲೇ ಸರೋಜಾ ದೇವಿಗೆ ಚಿತ್ರರಂಗದಲ್ಲಿ ಸಾಕಷ್ಟು ಜನಪ್ರಿಯತೆ ಸಿಕ್ಕಿತು. ಇದು ಅವರಿಗೆ ಸಾಕಷ್ಟು ಆತಂಕವನ್ನು ಉಂಟು ಮಾಡಿತ್ತು. 

ದೂರ ಹೋಗಲು.. 

ಸರೋಜಾ ದೇವಿ ಅವರು ಚಿತ್ರರಂಗದಿಂದ ದೂರ ಹೋಗಲು ಪ್ರಯತ್ನಿಸಿದ್ದರು. ಆದರೆ, ಚಿತ್ರರಂಗವೇ ಅವರನ್ನು ಹುಡುಕಿ ಬಂದಿತ್ತು. 

ಶಾಕ್ ಆಗಿದ್ದರು 

ಸರೋಜಾ ದೇವಿ ಅವರಿಗೆ ಸಿಕ್ಕ ಯಶಸ್ಸಿನಿಂದ ಶಾಕ್ ಆಗಿದ್ದರು. ಏನಾಗುತ್ತಿದೆ ಎಂಬುದೇ ಅವರಿಗೆ ಗೊತ್ತಾಗಿರಲಿಲ್ಲ. 

ಕನ್ನಡ ಚಿತ್ರರಂಗ

ಸರೋಜಾದೇವಿ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಹೆಸರು ಮಾಡಿದ್ದರು. ತೆಲುಗು, ತಮಿಳು ಮೊದಲಾದ ಭಾಷೆಗಳಲ್ಲೂ ಅವರು ಗುರುತಿಸಿಕೊಂಡಿದ್ದರು. 

ಅಂತ್ಯಕ್ರಿಯೆ

ಜುಲೈ 15ರಂದು ಅವರ ಅಂತ್ಯಕ್ರಿಯೆ ನಡೆಯಲಿದೆ. ಅಲ್ಲಿಯವರೆಗೆ ಅವರ ನಿವಾಸದಲ್ಲೇ ಅಂತಿಮ ಸಂಸ್ಕಾರಕ್ಕೆ ವ್ಯವಸ್ಥೆ ಮಾಡಲಾಗಿದೆ.