Pic credit - Instagram

Author: Rajesh Duggumane

ರಿಷಬ್ ಶೆಟ್ಟಿ  ಜನ್ಮದಿನ; ಸ್ಟಾರ್ ನಟ ನಡೆದು ಬಂದ ಹಾದಿ ಇಲ್ಲಿದೆ

07 July 2026

ಆರಂಭಿಕ ದಿನಗಳು

ಕನ್ನಡ ಚಿತ್ರರಂಗದಲ್ಲಿ ಸಣ್ಣ ಪುಟ್ಟ ಪಾತ್ರಗಳ ಮೂಲಕ ತಮ್ಮ ನಟನಾ ಪಯಣವನ್ನು ರಿಷಬ್ ಶೆಟ್ಟಿ ಆರಂಭಿಸಿದರು.

ಲೂಸಿಯಾ ಪಾತ್ರ

ಸೂಪರ್ ಹಿಟ್ 'ಲೂಸಿಯಾ' ಚಿತ್ರದಲ್ಲಿ ಅವರು ನಿರ್ವಹಿಸಿದ ಸಣ್ಣ ಪೊಲೀಸ್ ಅಧಿಕಾರಿ ಪಾತ್ರ ಇಂದಿಗೂ ನೆನಪಿನಲ್ಲಿ ಉಳಿಯುತ್ತದೆ.

ನಿರ್ದೇಶನ ಹಾದಿ

'ಕಿರಿಕ್ ಪಾರ್ಟಿ' ಸಿನಿಮಾ ನಿರ್ದೇಶಿಸುವ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ದೊಡ್ಡ ಮಟ್ಟದ ಯಶಸ್ಸು ಹಾಗೂ ಜನಪ್ರಿಯತೆ ಗಳಿಸಿದರು.

ಗ್ಲೋಬಲ್ ಸ್ಟಾರ್

ಹೊಂಬಾಳೆ ಫಿಲ್ಮ್ಸ್ ಸಂಸ್ಥೆಯ 'ಕಾಂತಾರ' ಚಿತ್ರದ ಮೂಲಕ ಜಾಗತಿಕ ಮಟ್ಟದಲ್ಲಿ ಭರ್ಜರಿ ಕಲೆಕ್ಷನ್ ಮಾಡಿ ಇತಿಹಾಸ ಸೃಷ್ಟಿಸಿದರು.

ಡಿವೈನ್ ಸ್ಟಾರ್

ಬಾಕ್ಸ್ ಆಫೀಸ್ ಧೂಳೀಪಟ ಮಾಡಿದ ರಿಷಬ್ ಸದ್ಯ 'ಕಾಂತಾರ ಚಾಪ್ಟರ್ 1' ಸಿನಿಮಾ ಮೂಲಕ ಮತ್ತೊಂದು ದೊಡ್ಡ ಗೆಲುವು ಕಂಡಿದ್ದಾರೆ. 

ಸುಂದರ ಸಂಸಾರ

ಅವರ ವೈವಾಹಿಕ ಜೀವನ ಅದ್ಭುತವಾಗಿದ್ದು ಪತ್ನಿ ಪ್ರಗತಿ ಶೆಟ್ಟಿ ಸದಾ ಇವರ ಎಲ್ಲಾ ಯಶಸ್ಸಿನ ಹಿಂದೆ ನಿಂತಿದ್ದಾರೆ. 

ಮುದ್ದಾದ ಮಕ್ಕಳು

ಈ ದಂಪತಿಗೆ ರಣವಿತ್ ಮತ್ತು ರಾಧ್ಯ ಎಂಬ ಇಬ್ಬರು ಮುದ್ದಾದ ಮಕ್ಕಳಿದ್ದು ಇಡೀ ಕುಟುಂಬ ಸದಾ ಸಂತೋಷದಿಂದಿದೆ.