Pic credit - Instagram

Author: Rajesh Duggumane

21 July 2025

ಅಂದುಕೊಂಡ ದಿನಾಂಕದಂದೇ ಬರಲಿದೆ ‘ಕಾಂತಾರ: ಚಾಪ್ಟರ್ 1’

ಕಾಂತಾರ

ರಿಷಬ್ ಶೆಟ್ಟಿ ನಟನೆಯ ಹೊಸ ಸಿನಿಮಾ ‘ಕಾಂತಾರ: ಚಾಪ್ಟರ್ 1’ ಶೂಟಿಂಗ್ ಪೂರ್ಣಗೊಂಡಿದೆ.  ಈ ಬಗ್ಗೆ ಹೊಂಬಾಳೆ ಮಾಹಿತಿ ನೀಡಿದೆ. 

ಅಕ್ಟೋಬರ್ ರಿಲೀಸ್ 

ಕಾಂತಾರ ಸಿನಿಮಾ ಅಕ್ಟೋಬರ್​ನಲ್ಲೇ ರಿಲೀಸ್ ಆಗಲಿದೆ. ಅಕ್ಟೋಬರ್ 2ರಂದು ಚಿತ್ರ ಬಿಡುಗಡೆ ಕಾಣಲಿದೆ. 

255 ದಿನ ಶೂಟ್ 

ಕಾಂತಾರ ಸಿನಿಮಾದ ಶೂಟ್ ಬರೋಬ್ಬರಿ 255 ದಿನಗಳ ಕಾಲ ನಡೆದಿದೆ. 3 ವರ್ಷ ಸಿನಿಮಾ ಕೆಲಸಗಳು ನಡೆದಿವೆ. 

ರಿಷಬ್ ನಿರ್ದೇಶ 

ರಿಷಬ್ ಶೆಟ್ಟಿ  ನಟನೆ ಹಾಗೂ ನಿರ್ದೇಶನ ಚಿತ್ರಕ್ಕೆ ಇದೆ. ಈ ಚಿತ್ರದ ಪಾತ್ರವರ್ಗದ ಬಗ್ಗೆ ಹೆಚ್ಚಿನ ಮಾಹಿತಿ ರಿವೀಲ್ ಆಗಿಲ್ಲ.

ಪತ್ನಿ ಬೆಂಬಲ

ರಿಷಬ್ ಅವರಿಗೆ ಪತ್ನಿಯ ಬೆಂಬಲ ಸಿಕ್ಕಿದೆ. ಪತ್ನಿ ಪ್ರಗತಿ ಅವರು ರಿಷಬ್ ಅವರ ಬೆಂಬಲಕ್ಕೆ ಸದಾ ಇದ್ದಾರೆ. 

ಬಟ್ಟೆ ಡಿಸೈನ್ 

ಕಾಸ್ಟ್ಯೂಮ್ ಡಿಸೈನ್ ಜವಾಬ್ದಾರಿಯನ್ನು ಪ್ರಗತಿ ಅವರೇ ವಹಿಸಿಕೊಂಡಿದ್ದಾರೆ. ಇದಕ್ಕೆ ಪತಿಯಿಂದ ಮಾರ್ಗದರ್ಶನ ಪಡೆದಿದ್ದಾರೆ.

ಕೆಲವು ಅವಘಡ 

‘ಕಾಂತಾರ: ಚಾಪ್ಟರ್ 1’ ಸಿನಿಮಾ ಸೆಟ್​ನಲ್ಲಿ ಕೆಲವು ಅವಘಡಗಳು ನಡೆದಿವೆ.  ಆದರೆ, ಇದನ್ನು ಮರೆತು ಚಿತ್ರತಂಡ ಶ್ರಮ ಹಾಕುತ್ತಿದೆ. 

ದೇವರಿಗೆ ಹರಕೆ 

ಸಿನಿಮಾ ಯಶಸ್ಸು ಕಾಣಲಿ ಎಂದು ರಿಷಬ್ ಹಾಗೂ ಪತ್ನಿ ಪ್ರಗತಿ ಸಾಕಷ್ಟು ಹರಕೆ ಹೊತ್ತಿದ್ದಾರೆ.