Pic credit - Instagram

Author: Rajesh Duggumane

ರುಕ್ಮಿಣಿ ವಸಂತ್ ಹೊಸ ಲುಕ್​ಗೆ ಫ್ಯಾನ್ಸ್ ಫಿದಾ

09 Sep 2026

ಸ್ಯಾಂಡಲ್‌ವುಡ್ ನಟಿ

ರುಕ್ಮಿಣಿ ವಸಂತ್ ಅವರು ಕನ್ನಡ ಚಿತ್ರರಂಗದ ಉದಯೋನ್ಮುಖ ಮತ್ತು ಅತ್ಯಂತ ಜನಪ್ರಿಯ ಪ್ರತಿಭಾವಂತ ನಟಿಯಾಗಿದ್ದಾರೆ.

ಚಿತ್ರರಂಗಕ್ಕೆ ಪಾದಾರ್ಪಣೆ

'ಬೀರಬಲ್' ಸಿನಿಮಾದ ಮೂಲಕ ಚಿತ್ರರಂಗ ಪ್ರವೇಶಿಸಿದ ಇವರು ತಮ್ಮ ನಟನೆಯಿಂದ ಮೊದಲ ಚಿತ್ರದಲ್ಲೇ ಗಮನ ಸೆಳೆದರು. 

ಸಪ್ತ ಸಾಗರದಾಚೆಗೆ

'ಸಪ್ತ ಸಾಗರದಾಚೆ ಎಲ್ಲೋ' ಚಿತ್ರದ ಪ್ರಿಯಾ ಪಾತ್ರವು ಇವರಿಗೆ ಅಪಾರ ಪ್ರಮಾಣದ ಅಭಿಮಾನಿಗಳನ್ನು ತಂದುಕೊಟ್ಟಿದೆ.

ಸಹಜ ಅಭಿನಯ

ತಮ್ಮ ಅದ್ಭುತ ಹಾವಭಾವ ಹಾಗೂ ಸಹಜ ಅಭಿನಯದ ಮೂಲಕ ಪ್ರೇಕ್ಷಕರ ಮನಸ್ಸನ್ನು ಗೆಲ್ಲುವಲ್ಲಿ ಇವರು ಯಶಸ್ವಿಯಾಗಿದ್ದಾರೆ.

ಪ್ರತಿಭೆ ಸಮ್ಮಿಲನ

ತಮ್ಮ ಸರಳತೆ, ಸೌಂದರ್ಯ ಮತ್ತು ನಟನಾ ಕೌಶಲ್ಯದಿಂದ ಭಾರತೀಯ ಚಿತ್ರರಂಗದಲ್ಲಿ ಹೊಸ ಭರವಸೆ ಮೂಡಿಸಿದ್ದಾರೆ. 

ಪರಭಾಷಾ ಅವಕಾಶ

ಕನ್ನಡ ಮಾತ್ರವಲ್ಲದೆ ತಮಿಳು ಹಾಗೂ ತೆಲುಗು ಚಿತ್ರರಂಗದಲ್ಲೂ ಇವರಿಗೆ ಸಾಲು ಸಾಲು ಆಫರ್‌ಗಳು ಸಿಗುತ್ತಿವೆ. 

ಯಶಸ್ವಿ ಪಯಣ

ಪ್ರಸ್ತುತ ಸಾಲು ಸಾಲು ಹಿಟ್ ಸಿನಿಮಾಗಳನ್ನು ನೀಡುತ್ತಾ ಚಿತ್ರರಂಗದ ಬಹುಬೇಡಿಕೆಯ ನಟಿಯಾಗಿ ಇವರು ಹೊರಹೊಮ್ಮಿದ್ದಾರೆ.