Pic credit - Instagram

Author: Rajesh Duggumane

‘ಟಾಕ್ಸಿಕ್’ ಟ್ರೇಲರ್ ಈವೆಂಟ್​​ನಲ್ಲಿ ಮಿಂಚಿದ ರುಕ್ಮಿಣಿ ವಸಂತ್ 

10 August 2026

ಮಿಂಚಿದ ತಾರೆ

ರಾಕಿಂಗ್ ಸ್ಟಾರ್ ಯಶ್ ಅವರ 'ಟಾಕ್ಸಿಕ್' ಸಿನಿಮಾದ ಅದ್ಧೂರಿ ಟ್ರೇಲರ್ ಲಾಂಚ್ ಈವೆಂಟ್‌ನಲ್ಲಿ ನಟಿ ರುಕ್ಮಿಣಿ ವಸಂತ್ ಎಲ್ಲರ ಗಮನ ಸೆಳೆದಿದ್ದಾರೆ.

ಅದ್ಭುತ ಲುಕ್

ಅತ್ಯಂತ ಸುಂದರವಾಗಿ ಕಂಗೊಳಿಸಿದ ರುಕ್ಮಿಣಿ ತಮ್ಮ ನಗುವಿನಿಂದ ನೆರೆದಿದ್ದ ಅಭಿಮಾನಿಗಳ ಮನ ಗೆದ್ದರು.

ವೇದಿಕೆ ಸದ್ದು

ವೇದಿಕೆ ಮೇಲೆ ಮಾತನಾಡಿದ ನಟಿ, ಈ ಸಿನಿಮಾದಲ್ಲಿ ತಮಗೆ ಅವಕಾಶ ನೀಡಿದ ನಿರ್ದೇಶಕಿ ಗೀತು ಮೋಹನ್ ದಾಸ್‌ಗೆ ಧನ್ಯವಾದ ತಿಳಿಸಿದರು.

ಮೆಲಿಸ್ಸಾ ಪಾತ್ರ

ಟ್ರೇಲರ್‌ನಲ್ಲಿ ರುಕ್ಮಿಣಿ ಅವರ ಮೆಲಿಸ್ಸಾ ಪಾತ್ರದ ಝಲಕ್ ನೋಡಿ ಅಭಿಮಾನಿಗಳು ಕಾತುರದಿಂದ ಸಿನಿಮಾಗಾಗಿ ಕಾಯುವಂತೆ ಮಾಡಿದೆ.

ಭಾರಿ ಮೆಚ್ಚುಗೆ

ಯಶ್ ಅವರಂತಹ ಪ್ಯಾನ್ ಇಂಡಿಯಾ ಸೂಪರ್ ಸ್ಟಾರ್ ಜೊತೆ ನಟಿಸಿದ ಅನುಭವವನ್ನು ಅವರು ವೇದಿಕೆಯಲ್ಲಿ ಮುಕ್ತವಾಗಿ ಹಂಚಿಕೊಂಡರು.

ಸಿಕ್ಕ ಆಫರ್

ಈ ಬಿಗ್ ಬಜೆಟ್ ಸಿನಿಮಾದ ಪ್ರಚಾರ ಕಾರ್ಯಕ್ರಮದ ನಂತರ ರುಕ್ಮಿಣಿ ಅವರಿಗೆ ದಕ್ಷಿಣ ಭಾರತದಲ್ಲಿ ಬೇಡಿಕೆ ಮತ್ತಷ್ಟು ಹೆಚ್ಚಾಗಿದೆ.

ದೊಡ್ಡ ನಿರೀಕ್ಷೆ

ಆಗಸ್ಟ್ 26ಕ್ಕೆ ಸಿನಿಮಾ ತೆರೆಗೆ ಬರಲಿದ್ದು, ರುಕ್ಮಿಣಿ ಅವರ ನಟನೆ ನೋಡಲು ಕನ್ನಡಿಗರು ಕಾತರದಿಂದ ಕಾಯುತ್ತಿದ್ದಾರೆ.