Pic credit - Instagram

Author: Rajesh Duggumane

‘ಟಾಕ್ಸಿಕ್’ ಸಿನಿಮಾ ಮೂಲಕ ಗೆದ್ದು ಬೀಗ್ತಾರಾ ರುಕ್ಮಿಣಿ ವಸಂತ್ 

19 August 2026

ಆರಂಭಿಕ ಪಯಣ

ಬೀರ್ಬಲ್ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ರುಕ್ಮಿಣಿ ವಸಂತ್ ಆರಂಭದಲ್ಲೇ ಗಮನ ಸೆಳೆದಿದ್ದರು.

ಸಪ್ತ ಸಾಗರದಾಚೆಗೆ

ಸಪ್ತ ಸಾಗರದಾಚೆ ಎಲ್ಲೋ ಸಿನಿಮಾದ ಪ್ರಿಯಾ ಪಾತ್ರ ಅವರ ನಟನಾ ವೃತ್ತಿಜೀವನಕ್ಕೆ ದೊಡ್ಡ ಯಶಸ್ಸು ತಂದುಕೊಟ್ಟಿತು.

ಸ್ಟಾರ್ ಪಟ್ಟ

ಕಾಂತಾರ ಚಾಪ್ಟರ್ 1 ಸೇರಿದಂತೆ ಹಲವು ಬಿಗ್ ಬಜೆಟ್ ಸಿನಿಮಾಗಳಲ್ಲಿ ನಟಿಸಿ ಸೌತ್ ಇಂಡಿಯಾದಲ್ಲಿ ಬೇಡಿಕೆ ಗಿಟ್ಟಿಸಿಕೊಂಡಿದ್ದಾರೆ.

ಟಾಕ್ಸಿಕ್ ಪಯಣ

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಟಾಕ್ಸಿಕ್ ಸಿನಿಮಾದಲ್ಲಿ ರುಕ್ಮಿಣಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಅಂತರರಾಷ್ಟ್ರೀಯ ಮಟ್ಟ

ಇಂಗ್ಲಿಷ್ ಹಾಗೂ ಕನ್ನಡದಲ್ಲಿ ತಯಾರಾಗುತ್ತಿರುವ ಟಾಕ್ಸಿಕ್ ಮೂಲಕ ಅವರ ನಟನಾ ಶೈಲಿ ಜಾಗತಿಕ ಮಟ್ಟ ತಲುಪಲಿದೆ.

ಮೆಲಿಸ್ಸಾ ಪಾತ್ರ

ಟಾಕ್ಸಿಕ್ ಚಿತ್ರದಲ್ಲಿ ಮೆಲಿಸ್ಸಾ ಎಂಬ ವಿಭಿನ್ನ ಪಾತ್ರದ ಮೂಲಕ ರುಕ್ಮಿಣಿ ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗಿದ್ದಾರೆ.

ಮುಂದಿನ ಹಂತ

ಈ ಪ್ಯಾನ್ ವಲ್ಡ್ ಸಿನಿಮಾ ಮೂಲಕ ರುಕ್ಮಿಣಿ ವಸಂತ್ ಅವರ ಕೆರಿಯರ್ ಮತ್ತೊಂದು ಎತ್ತರಕ್ಕೆ ಏರಲಿದೆ.