Pic credit - Instagram

Author: Rajesh Duggumane

ಸಮಂತಾ ಪ್ರೆಗ್ನೆನ್ಸಿ ವಿಷಯ ಈಗ ಕನ್​​ಫರ್ಮ್​ 

22 June 2026

ಬೆಳ್ಳಿ ತೆರೆ

ನಟಿ ಸಮಂತಾ ನಟನೆಯ ‘ಮಾ ಇಂಟಿ ಬಂಗಾರಂ’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಸದ್ಯ ಭರ್ಜರಿ ಯಶಸ್ಸು ಕಾಣುತ್ತಿದೆ.

ಗಳಿಕೆ ದಾಖಲೆ

ಬಿಡುಗಡೆಯಾದ ಕೇವಲ ಮೂರೇ ದಿನಗಳಲ್ಲಿ ಈ ಚಿತ್ರವು ಜಾಗತಿಕವಾಗಿ ನಲವತ್ತು ಕೋಟಿಗೂ ಅಧಿಕ ರೂಪಾಯಿ ಕಲೆಕ್ಷನ್ ಮಾಡಿದೆ.

ಬೇಬಿ ಬಂಪ್

ಚಿತ್ರದ ಯಶಸ್ಸಿನ ಸಂಭ್ರಮಾಚರಣೆ ವೇಳೆ ಸಮಂತಾ ಅವರ ಹೊಟ್ಟೆಯ ಭಾಗ ದೊಡ್ಡದಾಗಿ ಕಾಣಿಸಿದ್ದು ಎಲ್ಲರ ಗಮನ ಸೆಳೆಯಿತು.

ಮಧುರ ವಾರ್ತೆ

ನಟಿ ಸಮಂತಾ ಶೀಘ್ರದಲ್ಲೇ ತಾಯಿ ಆಗುತ್ತಿದ್ದಾರೆ ಎಂಬ ಪಾಸಿಟಿವ್ ಸುದ್ದಿಯನ್ನು ಈಗ ಅವರ ಆಪ್ತ ವಲಯ ಖಚಿತಪಡಿಸಿದೆ.

ಹೊಸ ಪಯಣ

ನಾಗ ಚೈತನ್ಯ ಅವರಿಂದ ವಿಚ್ಛೇದನ ಪಡೆದ ನಂತರ ಸಮಂತಾ ಅವರು ಕಳೆದ ವರ್ಷ ನಿರ್ದೇಶಕ ರಾಜ್ ಅವರನ್ನು ಮದುವೆಯಾಗಿದ್ದರು.

ಗೆಳತಿ ಸಾಕ್ಷಿ

ಖ್ಯಾತ ನಿರ್ದೇಶಕಿ ನಂದಿನಿ ರೆಡ್ಡಿ ಅವರು ಸಂದರ್ಶನವೊಂದರಲ್ಲಿ ಸಮಂತಾ ಗರ್ಭಿಣಿ ಆಗಿರುವ ಸುಂದರ ವಿಷಯವನ್ನು ಅಧಿಕೃತವಾಗಿ ಹಂಚಿಕೊಂಡಿದ್ದಾರೆ.

ಕನ್ನಡದ ನಟ

ಮಹಿಳಾ ಪ್ರಧಾನ ಕಥೆಯುಳ್ಳ ಈ ಜನಪ್ರಿಯ ತೆಲುಗು ಸಿನಿಮಾದಲ್ಲಿ ಸ್ಯಾಂಡಲ್‌ವುಡ್ ಖ್ಯಾತ ನಟ ದಿಗಂತ್ ಪ್ರಮುಖವಾಗಿ ನಟಿಸಿದ್ದಾರೆ.