Pic credit - Instagram

Author: Rajesh Duggumane

ಸಮಂತಾಗೆ ಗಂಡು ಮಗು ಜನನ, ಇಟ್ಟ ಹೆಸರೇನು?

19 Nov 2026

ಸಿಹಿ ಸುದ್ದಿ

ನಟಿ ಸಮಂತಾ ರುತ್ ಪ್ರಭು ಮತ್ತು ನಿರ್ದೇಶಕ ರಾಜ್ ನಿಡಿಮೋರು ದಂಪತಿ ಈಗ ಪೋಷಕರಾಗಿ ಬಡ್ತಿ ಪಡೆದಿದ್ದಾರೆ.

ಮಗುವಿನ ಹೆಸರು

ನವೆಂಬರ್ 19ರಂದು ಜನಿಸಿದ ತಮ್ಮ ಮೊದಲ ಗಂಡು ಮಗುವಿಗೆ ದಂಪತಿ ದೇವ್ ನಿಡಿಮೋರು ಎಂದು ಹೆಸರಿಟ್ಟಿದ್ದಾರೆ.

ಮೊದಲ ಫೋಟೋ

ಸಾಮಾಜಿಕ ಜಾಲತಾಣದಲ್ಲಿ ಮಗುವಿನ ಫೋಟೋ ಹಂಚಿಕೊಂಡ ಸಮಂತಾ ತಮ್ಮ ಹೃದಯ ಸಂತೋಷದಿಂದ ತುಂಬಿದೆ ಎಂದು ಬರೆದುಕೊಂಡಿದ್ದಾರೆ.

ಗರ್ಭಾವಸ್ಥೆಯ ಪಯಣ

ಗರ್ಭಿಣಿಯಾಗಿದ್ದಾಗಲೂ ಸಮಂತಾ ನಿಯಮಿತವಾಗಿ ಜಿಮ್ ವರ್ಕೌಟ್ ಮಾಡುತ್ತಿದ್ದ ಫೋಟೋಗಳನ್ನು ಹಂಚಿಕೊಂಡು ಅಭಿಮಾನಿಗಳ ಗಮನ ಸೆಳೆದಿದ್ದರು.

ವಿಶೇಷ ಪೂಜೆ

ತಾಯಿ ಮತ್ತು ಮಗುವಿನ ಒಳಿತಿಗಾಗಿ ಇತ್ತೀಚೆಗೆ ಮನೆಯಲ್ಲಿ ಕಲಾ ಆವರಣ ಎಂಬ ವಿಶೇಷ ಪೂಜೆ ನೆರವೇರಿಸಲಾಗಿತ್ತು.

ಸರಳ ವಿವಾಹ

ಸಮಂತಾ ಮತ್ತು ರಾಜ್ ನಿಡಿಮೋರು 2025ರ ಡಿಸೆಂಬರ್‌ನಲ್ಲಿ ಕೊಯಮತ್ತೂರಿನ ಇಶಾ ಯೋಗ ಕೇಂದ್ರದಲ್ಲಿ ಸರಳವಾಗಿ ಮದುವೆಯಾಗಿದ್ದರು.

ಸಿನಿಮಾ ಪಯಣ

ಸಿನಿಮಾ ಹಾಗೂ ವೆಬ್ ಸೀರಿಸ್ ನಟನೆಯಲ್ಲಿ ಸಮಂತಾ ಬ್ಯುಸಿ ಇದ್ದರೆ ರಾಜ್ ನಿರ್ದೇಶನದಲ್ಲಿ ತೊಡಗಿಕೊಂಡಿದ್ದಾರೆ.