Pic credit - Instagram

Author: Rajesh Duggumane

ಟ್ರೆಕ್ಕಿಂಗ್ ಇಷ್ಟಪಡ್ತಾರೆ ಕನ್ನಡದ ನಟಿ ಸಂಗೀತಾ ಶೃಂಗೇರಿ

01 August 2026

ಹಸಿರ ರಾಶಿ

ನಟಿ ಸಂಗೀತಾ ಅವರು ಇತ್ತೀಚೆಗೆ ಸುಂದರವಾದ ಬೆಟ್ಟ ಗುಡ್ಡಗಳ ನಡುವೆ ಟ್ರೆಕ್ಕಿಂಗ್ ನಡೆಸಿ ಪ್ರಕೃತಿ ಸೌಂದರ್ಯವನ್ನು ಸವಿದಿದ್ದಾರೆ.

ಕಣ್ಮನ ಸೆಳೆಯುತ್ತೆ

ಬೆಟ್ಟದ ಹಸಿರು ಸಸ್ಯರಾಶಿ ಹಾಗೂ ಮಂಜಿನ ವಾತಾವರಣವು ಅವರ ಈ ಸಾಹಸಮಯ ಪಯಣಕ್ಕೆ ಮತ್ತಷ್ಟು ರಂಗು ತುಂಬಿದೆ.

ನೀಲಿ ಹೂವು

ಟ್ರೆಕ್ಕಿಂಗ್ ಹಾದಿಯಲ್ಲಿ ಸಿಕ್ಕ ಅಪರೂಪದ ನೀಲಿ ಬಣ್ಣದ ಕಾಡು ಹೂವುಗಳನ್ನು ನಟಿ ಅತ್ಯಂತ ಕುತೂಹಲದಿಂದ ವೀಕ್ಷಿಸಿ ಸಂಭ್ರಮಿಸಿದ್ದಾರೆ

ಸಾಹಸದ ಹಾದಿ

ಹೆಗಲಿಗೊಂದು ಬ್ಯಾಗ್ ಹಾಗೂ ಕೈಯಲ್ಲೊಂದು ಸ್ಟಿಕ್ ಹಿಡಿದು ಸಂಗೀತಾ ಬೆಟ್ಟದ ಕಠಿಣ ಹಾದಿಯನ್ನು ಸಲೀಸಾಗಿ ದಾಟಿ ಮುನ್ನಡೆದಿದ್ದಾರೆ.

ಕಿರುತೆರೆ ಪಯಣ

ಸಂಗೀತಾ ಶೃಂಗೇರಿ ಅವರು ಕಿರುತೆರೆ ಮೂಲಕ ತಮ್ಮ ಬಣ್ಣದ ಬದುಕು ಆರಂಭಿಸಿದರು. 

ಬಿಗ್ ಬಾಸ್

ಆ ಬಳಿಕ ಕನ್ನಡದ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಭಾಗವಹಿಸಿ ತಮ್ಮ ನೇರ ನಡೆನುಡಿಯಿಂದ ಗಮನ ಸೆಳೆದಿದ್ದರು.

ಮಾಜಿ ಸ್ಪರ್ಧಿ

ಬಿಗ್ ಬಾಸ್ ಮನೆಯ ಕಠಿಣ ಟಾಸ್ಕ್‌ಗಳನ್ನು ಯಶಸ್ವಿಯಾಗಿ ಎದುರಿಸಿ ಅವರು ಫೈನಲಿಸ್ಟ್ ಆಗಿ ಹೊರಹೊಮ್ಮಿ ಸೈ ಎನಿಸಿಕೊಂಡಿದ್ದರು.