Pic credit - Instagram

Author: Rajesh Duggumane

ಹೊಸ ಆಫರ್ ಪಡೆದ ಸಾರಾ ಅರ್ಜುನ್ 

24  Nov 2026

ಯಶ್ ರಾಜ್ ಎಂಟ್ರಿ

‘ಧುರಂಧರ್’ ಖ್ಯಾತಿಯ ನಟಿ ಸಾರಾ ಅರ್ಜುನ್ ಅವರಿಗೆ ಪ್ರತಿಷ್ಠಿತ ಯಶ್ ರಾಜ್ ಫಿಲ್ಮ್ಸ್ ಬ್ಯಾನರ್‌ನಲ್ಲಿ ಮೊದಲ ಅವಕಾಶ ಸಿಕ್ಕಿದೆ.

ಹೊಸ ಲವ್ ಸ್ಟೋರಿ

ಮನಿಶ್ ಶರ್ಮಾ ನಿರ್ದೇಶನದ ಹೆಸರಿಡದ ಹೊಸ ರೊಮ್ಯಾಂಟಿಕ್ ಮ್ಯೂಸಿಕಲ್ ಪ್ರೇಮಕಥೆಯಲ್ಲಿ ಸಾರಾ ಅರ್ಜುನ್ ಮುಖ್ಯ ಪಾತ್ರದಲ್ಲಿ ನಟಿಸಲಿದ್ದಾರೆ.

ಪಂಜಾಬ್‌ನಲ್ಲಿ ಶೂಟಿಂಗ್

ಈ ಚಿತ್ರದ ಪ್ರೀ-ಪ್ರೊಡಕ್ಷನ್ ಕೆಲಸ ಶುರುವಾಗಿದ್ದು, ಜನವರಿ 2027ರಲ್ಲಿ ಪಂಜಾಬ್‌ನಲ್ಲಿ ಸಿನಿಮಾ ಚಿತ್ರೀಕರಣ ಆರಂಭವಾಗುವ ನಿರೀಕ್ಷೆಯಿದೆ.

ಅಂಬರೀಶ್ ವರ್ಮಾ ಸಾಥ್

‘ಸಪ್ನೆ ವರ್ಸಸ್ ಎವರಿವನ್’ ಖ್ಯಾತಿಯ ನಟ ಅಂಬರೀಶ್ ವರ್ಮಾ ಕೂಡ ಈ ಚಿತ್ರದ ತಾರಾಗಣದಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ.

ಎಂಟು ಹಾಡುಗಳು

ಸಂಗೀತಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇರುವ ಈ ಪ್ರೇಮಕಥೆಯಲ್ಲಿ ಒಟ್ಟು ಎಂಟು ಸುಮಧುರ ಹಾಡುಗಳು ಇರಲಿವೆ ಎಂದು ವರದಿಯಾಗಿದೆ.

ಮನಿಶ್ ಕಮ್‌ಬ್ಯಾಕ್

‘ಬ್ಯಾಂಡ್ ಬಾಜಾ ಬಾರಾತ್’ ಖ್ಯಾತಿಯ ನಿರ್ದೇಶಕ ಮನಿಶ್ ಶರ್ಮಾ ಮತ್ತೆ ತಮ್ಮ ಮೆಚ್ಚಿನ ರೊಮ್ಯಾಂಟಿಕ್ ಶೈಲಿಗೆ ಮರಳುತ್ತಿದ್ದಾರೆ.

ಅಧಿಕೃತ ಘೋಷಣೆ

ಸಾರಾ ಅರ್ಜುನ್ ಮತ್ತು ಮನಿಶ್ ಶರ್ಮಾ ಕಾಂಬಿನೇಷನ್ ಸಿನಿಮಾದ ಬಗ್ಗೆ ಯಶ್ ರಾಜ್ ಸಂಸ್ಥೆಯಿಂದ ಅಧಿಕೃತ ಘೋಷಣೆ ಬಾಕಿಯಿದೆ.