Pic credit - Instagram

Author: Rajesh Duggumane

ಕಣ್ಣೀರು ಹಾಕಿದ ಬಿಗ್ ಬಾಸ್ ಸ್ಪರ್ಧಿ ಸೌಂದರ್ಯಾ ಶೆಟ್ಟಿ 

17 Sep 2026

ಮಂಜು ನಾಮಿನೇಷನ್

ಬಿಗ್ ಬಾಸ್ ಮನೆಯಲ್ಲಿ ನಡೆದ ನಾಮಿನೇಷನ್ ಪ್ರಕ್ರಿಯೆಯಲ್ಲಿ ಮಂಜು ಅವರು ಸೌಂದರ್ಯಾ ಶೆಟ್ಟಿ ಅವರನ್ನು ನೇರವಾಗಿ ನಾಮಿನೇಟ್ ಮಾಡಿದ್ದರು.

ಅಸಮಾಧಾನದ ಕಣ್ಣೀರು

ಮಂಜು ಅವರ ಮಾತುಗಳು ಸೌಂದರ್ಯಾ ಶೆಟ್ಟಿ ಅವರ ಮನಸ್ಸಿಗೆ ತೀವ್ರವಾಗಿ ನೋವುಂಟು ಮಾಡಿದ್ದು, ಅವರು ಕಣ್ಣೀರು ಹಾಕಿದ್ದಾರೆ.

ಕ್ಯಾರೆಕ್ಟರ್ ಪ್ರಶ್ನೆ

ನಾಮಿನೇಷನ್ ವೇಳೆ ಸೌಂದರ್ಯಾ ಅವರ ಕ್ಯಾರೆಕ್ಟರ್ ಸರಿ ಇಲ್ಲ ಎಂಬಂತೆ ಮಂಜು ಮಾತನಾಡಿದ್ದು ಭಾರೀ ಚರ್ಚೆಗೆ ಕಾರಣವಾಯಿತು.

ಮನಸ್ಸಿಗೆ ನೋವು

ತಮ್ಮ ನಡವಳಿಕೆ ಮತ್ತು ವ್ಯಕ್ತಿತ್ವದ ಬಗ್ಗೆ ಬಂದ ಮಾತುಗಳನ್ನು ಸಹಿಸಲಾಗದೆ ಸೌಂದರ್ಯಾ ತೀವ್ರವಾಗಿ ಭಾವುಕರಾಗಿ ಅತ್ತರು.

ಸಹಸ್ಪರ್ಧಿಗಳ ಬೆಂಬಲ

ಸೌಂದರ್ಯಾ ಶೆಟ್ಟಿ ಕಣ್ಣೀರಿಡುತ್ತಿದ್ದಂತೆ ಮನೆಯಲ್ಲಿದ್ದ ಇತರ ಸ್ಪರ್ಧಿಗಳು ಬಂದು ಅವರನ್ನು ಸಮಾಧಾನಪಡಿಸಲು ಪ್ರಯತ್ನಿಸಿದರು.

ರಂಗೇರಿದ ಅಖಾಡ

ನಾಮಿನೇಷನ್ ಪ್ರಕ್ರಿಯೆಯಲ್ಲಿ ನಡೆದ ಈ ಘಟನೆಯಿಂದಾಗಿ ಬಿಗ್ ಬಾಸ್ ಮನೆಯಲ್ಲಿ ವಾಕ್ಸಮರ ಮತ್ತಷ್ಟು ಜೋರಾಗಿದೆ.

ವೀಕ್ಷಕರ ಕುತೂಹಲ

ಈ ವಿಷಯದ ಬಗ್ಗೆ ಮುಂಬರುವ ಸಂಚಿಕೆಯಲ್ಲಿ ಸುದೀಪ್ ಅವರು ಹೇಗೆ ಪಂಚಾಯಿತಿ ನಡೆಸಲಿದ್ದಾರೆ ಎಂಬ ಕುತೂಹಲ ಮೂಡಿದೆ.