Pic credit - Instagram

Author: Rajesh Duggumane

ಹಳದಿಶಾಸ್ತ್ರ ಸಂಭ್ರಮದಲ್ಲಿ ಸ್ಪಂದನಾ ಸೋಮಣ್ಣ 

26  Nov 2026

ಮದುವೆ ಸಂಭ್ರಮ

ಕಿರುತೆರೆ ನಟಿ ಹಾಗೂ ಬಿಗ್ ಬಾಸ್ ಮಾಜಿ ಸ್ಪರ್ಧಿ ಸ್ಪಂದನಾ ಸೋಮಣ್ಣ ಮನೆಯಲ್ಲಿ ಮದುವೆ ಸಂಭ್ರಮ ಕಳೆಗಟ್ಟಿದೆ.

ಹೊಸ ಬಾಳು

ತಮ್ಮ ದೀರ್ಘಕಾಲದ ಪ್ರಿಯಕರ ವರುಣ್ ಮುನಿರಾಜು ಅವರೊಂದಿಗೆ ಸ್ಪಂದನಾ ಸೋಮಣ್ಣ ಹೊಸ ಬದುಕಿಗೆ ಕಾಲಿಡಲು ಸಜ್ಜಾಗಿದ್ದಾರೆ.

ಹಳದಿ ಶಾಸ್ತ್ರ

ಕುಟುಂಬಸ್ಥರು ಮತ್ತು ಆಪ್ತರ ಸಮ್ಮುಖದಲ್ಲಿ ನಡೆದ ಹಳದಿ ಶಾಸ್ತ್ರದಲ್ಲಿ ನವಜೋಡಿ ಪರಸ್ಪರ ಹಳದಿ ಹಚ್ಚಿಕೊಂಡು ಸಂಭ್ರಮಿಸಿದ್ದಾರೆ.

ಪ್ರೀತಿಯ ಪಯಣ

ಕಳೆದ ಆರು ವರ್ಷಗಳಿಂದ ಪ್ರೀತಿಸುತ್ತಿದ್ದ ಈ ಜೋಡಿ ಕಳೆದ ಅಕ್ಟೋಬರ್‌ನಲ್ಲಿ ತಮ್ಮ ಪ್ರೀತಿಯನ್ನು ಅಧಿಕೃತವಾಗಿ ಘೋಷಿಸಿತ್ತು.

ಪ್ಯಾರಿಸ್ ಪ್ರಪೋಸಲ್

ಪ್ಯಾರಿಸ್‌ನ ಸುಂದರ ಐಫೆಲ್ ಟವರ್ ಎದುರು ಪ್ರಪೋಸ್ ಮಾಡಿದ್ದ ಫೋಟೋಗಳನ್ನು ಹಂಚಿಕೊಂಡು ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದರು.

ಸಂಗೀತ್ ಸಡಗರ

ಹಳದಿ ಶಾಸ್ತ್ರದ ಜೊತೆಗೆ ನಡೆದ ಸಂಗೀತ ಕಾರ್ಯಕ್ರಮದಲ್ಲಿ ವರುಣ್ ಜೊತೆ ಹೆಜ್ಜೆ ಹಾಕಿದ ಸ್ಪಂದನಾ ಭಾವುಕರಾಗಿದ್ದರು.

ಶುಭಾಶಯಗಳ ಮಹಾಪೂರ

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಈ ಸಂಭ್ರಮದ ವಿಡಿಯೋ ನೋಡಿ ಅಭಿಮಾನಿಗಳು ನವಜೋಡಿಗೆ ಶುಭ ಹಾರೈಸುತ್ತಿದ್ದಾರೆ.