Pic credit - Instagram

Author: Rajesh Duggumane

ತಾಂಡವ್ ರಾಮ್ ಎಲಿಮಿನೇಷನ್​ಗೆ ಎಲ್ಲರೂ ಶಾಕ್ 

25 Sep 2026

ಅಚ್ಚರಿಯ ಎಲಿಮಿನೇಷನ್

ಬಿಗ್ ಬಾಸ್ ಕನ್ನಡ ಮನೆಯಲ್ಲಿ ಪ್ರೇಕ್ಷಕರೂ ಊಹಿಸದ ಭಾರಿ ಅಚ್ಚರಿಯ ಎಲಿಮಿನೇಷನ್ ಪ್ರಕ್ರಿಯೆಯೊಂದು ಈ ವಾರ ನಡೆದಿದೆ.

ತಾಂಡವ್ ಹೊರಕ್ಕೆ

ಬೇರೆಯವರು ವೋಟ್ ಕಿತ್ತುಕೊಂಡ ಕಾರಣದಿಂದ ತಾಂಡವ್ ರಾಮ್ ಅವರು ಬಿಗ್ ಬಾಸ್ ಮನೆಯಿಂದ ಹೊರಬಿದ್ದಿದ್ದಾರೆ.

ಗಗನ್ ಕಣ್ಣೀರು

ಆತ್ಮೀಯ ಗೆಳೆಯ ತಾಂಡವ್ ಎಲಿಮಿನೇಟ್ ಆಗುತ್ತಿದ್ದಂತೆ ಸ್ಪರ್ಧಿ ಗಗನ್ ಚಿನ್ನಪ್ಪ ಗಳಗಳನೆ ಕಣ್ಣೀರು ಸುರಿಸಿ ಬೇಸರ ವ್ಯಕ್ತಪಡಿಸಿದ್ದಾರೆ.

ಗಟ್ಟಿಯಾದ ಗೆಳೆತನ

ಈ ಸೀಸನ್‌ನಲ್ಲಿ ಗಗನ್ ಹಾಗೂ ತಾಂಡವ್ ಇಬ್ಬರೂ ಗಳಸ್ಯ ಗಂಟಸ್ಯ ಸ್ನೇಹಿತರಂತೆ ಕೊನೆಯವರೆಗೂ ಜೊತೆಯಾಗಿ ಆಟವಾಡುತ್ತಿದ್ದರು.

ವಿಶೇಷ ಅಧಿಕಾರ

ಟಾಸ್ಕ್ ಗೆದ್ದ ನಾಲ್ಕು ಸ್ಪರ್ಧಿಗಳಿಗೆ ನಾಮಿನೇಷನ್‌ನಲ್ಲಿದ್ದವರ ವೋಟ್ ಕಿತ್ತುಕೊಳ್ಳುವ ವಿಶೇಷ ಅಧಿಕಾರವನ್ನು ಬಿಗ್ ಬಾಸ್ ನೀಡಿದ್ದರು.

ವೋಟ್ ಕಸಿದುಕೊಳ್ಳುವಿಕೆ

ಧನುಷ್ ಅವರು ತಾಂಡವ್ ಅವರಿಂದ ಶೇಕಡಾ ಐವತ್ತರಷ್ಟು ವೋಟ್ ಕಸಿದುಕೊಂಡಿದ್ದರಿಂದ ಈ ರೀತಿಯ ಪರಿಸ್ಥಿತಿ ಎದುರಾಯಿತು.

ಅನ್ಯಾಯದ ಬೇಸರ

ತಾಂಡವ್ ನಿರ್ಗಮನಕ್ಕೆ ‘ಇದು ನ್ಯಾಯಸಮ್ಮತವಲ್ಲ ಬಿಗ್ ಬಾಸ್’ ಎಂದು ಗಗನ್ ಓಪನ್ ಆಗಿಯೇ ಬೇಸರ ತೋಡಿಕೊಂಡಿದ್ದಾರೆ.