Pic credit - Instagram

Author: Rajesh Duggumane

ನಿರ್ದೇಶಕಿ ಗೀತು ಮೋಹನ್​ದಾಸ್ ಸಿನಿಮಾ ಜರ್ನಿ ಬಗ್ಗೆ ಇಲ್ಲಿದೆ ವಿವರ 

21 August 2026

ಆರಂಭಿಕ ಹಂತ

ಗೀತು ಮೋಹನ್‌ದಾಸ್ ಅವರು ಬಾಲನಟಿಯಾಗಿ ಮಲಯಾಳಂ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ ಎಲ್ಲರ ಗಮನ ಸೆಳೆದಿದ್ದರು.

ನಟನೆಯ ಜರ್ನಿ

ನಾಯಕಿಯಾಗಿ ಹಲವು ಯಶಸ್ವಿ ಸಿನಿಮಾಗಳಲ್ಲಿ ನಟಿಸಿ ತಮ್ಮ ಅತ್ಯುತ್ತಮ ಅಭಿನಯಕ್ಕಾಗಿ ರಾಜ್ಯ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.

ನಿರ್ದೇಶನದ ಹೆಜ್ಜೆ

ನಟನೆಯ ನಂತರ ಚಿತ್ರಕಥೆ ಮತ್ತು ನಿರ್ದೇಶನದತ್ತ ಗಮನ ಹರಿಸಿ ಪ್ರಶಸ್ತಿ ವಿಜೇತ ಕಿರುಚಿತ್ರವನ್ನು ನಿರ್ಮಿಸಿದರು.

ರಾಷ್ಟ್ರೀಯ ಗುರುತಿಸುವಿಕೆ

ಅವರ ಮೊದಲ ಪೂರ್ಣಪ್ರಮಾಣದ ಸಿನಿಮಾ 'ಲಯರ್ಸ್ ಡೈ' ಎರಡು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿತು.

ಆಸ್ಕರ್ ನಾಮನಿರ್ದೇಶನ

ಇವರ 'ಲಯರ್ಸ್ ಡೈ' ಚಿತ್ರವು ಭಾರತದ ಪರವಾಗಿ ಆಸ್ಕರ್ ಪ್ರಶಸ್ತಿಗೆ ಅಧಿಕೃತವಾಗಿ ಆಯ್ಕೆಯಾಗಿತ್ತು.

ಮೂತೋನ್ ಯಶಸ್ಸು

ನಂತರ ನಿರ್ದೇಶಿಸಿದ 'ಮೂತೋನ್' ಸಿನಿಮಾ ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡು ಅಪಾರ ಮೆಚ್ಚುಗೆಯನ್ನು ಗಳಿಸಿತು.

ಟಾಕ್ಸಿಕ್ ಪಾದಾರ್ಪಣೆ

ಈಗ ಯಶ್ ಅಭಿನಯದ ಬೃಹತ್ 'ಟಾಕ್ಸಿಕ್' ಸಿನಿಮಾಗೆ ಆ್ಯಕ್ಷನ್ ಕಟ್ ಹೇಳುವ ಮೂಲಕ ಭಾರತೀಯ ಚಿತ್ರರಂಗದಲ್ಲೇ ಸಂಚಲನ ಮೂಡಿಸಿದ್ದಾರೆ.