Pic credit - Instagram

Author: Rajesh Duggumane

ದಳಪತಿ ವಿಜಯ್ ಜನ್ಮದಿನಕ್ಕೆ ವಿಶ್ ಮಾಡಲೇ ಇಲ್ಲ ತ್ರಿಷಾ ಕೃಷ್ಣನ್ 

23 June 2026

ಜನ್ಮದಿನದ ಸಂಭ್ರಮ

ತಮಿಳುನಾಡು ಮುಖ್ಯಮಂತ್ರಿ ದಳಪತಿ ವಿಜಯ್ ಅವರು ಜೂನ್ 22 ರಂದು ತಮ್ಮ 52ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ.

ಅಭಿಮಾನಿಗಳ ನಿರೀಕ್ಷೆ

ಪ್ರತಿ ವರ್ಷ ತಪ್ಪದೇ ವಿಶ್ ಮಾಡುತ್ತಿದ್ದ ನಟಿ ತ್ರಿಷಾ ಕೃಷ್ಣನ್ ಈ ಬಾರಿಯೂ ವಿಶೇಷವಾಗಿ ಹಾರೈಸುತ್ತಾರೆ ಎಂದು ಎಲ್ಲರೂ ಭಾವಿಸಿದ್ದರು.

ನಟಿಯ ಮೌನ

ಆದರೆ ಜನ್ಮದಿನ ಮುಗಿದರೂ ತ್ರಿಷಾ ತಮ್ಮ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ವಿಜಯ್ ಅವರಿಗೆ ಯಾವುದೇ ಶುಭಾಶಯ ಕೋರದೆ ಮೌನವಾಗುಳಿದಿದ್ದಾರೆ.

ತೀವ್ರ ಚರ್ಚೆ

ಚಿತ್ರರಂಗದ ಪ್ರಮುಖ ಗಣ್ಯರೆಲ್ಲರೂ ಸಿಎಂ ವಿಜಯ್ ಅವರಿಗೆ ಶುಭ ಹಾರೈಸಿದ್ದು, ತ್ರಿಷಾ ಮೌನ ಮಾತ್ರ ಈಗ ತೀವ್ರ ಚರ್ಚೆಗೆ ಕಾರಣವಾಗಿದೆ.

ಗಾಸಿಪ್‌ಗಳ ಬಿಸಿ

ಇತ್ತೀಚಿನ ದಿನಗಳಲ್ಲಿ ಇವರಿಬ್ಬರ ಆಪ್ತ ಗೆಳತನದ ಬಗ್ಗೆ ಹಲವು ವದಂತಿಗಳು ಹರಿದಾಡುತ್ತಿದ್ದು, ಗಾಸಿಪ್ ಪ್ರಿಯರು ಕಣ್ಣಿಟ್ಟು ಕಾಯುತ್ತಿದ್ದರು.

ರಾಜತಾಂತ್ರಿಕ ನಡೆ

ವಿಜಯ್ ಈಗ ಪೂರ್ಣಾವಧಿ ರಾಜಕಾರಣಿಯಾಗಿ ಮುಖ್ಯಮಂತ್ರಿಯಾಗಿರುವುದರಿಂದ, ಟ್ರೋಲ್‌ಗಳಿಂದ ದೂರವಿರಲು ನಟಿ ಈ ರಾಜತಾಂತ್ರಿಕ ನಡೆ ಇಟ್ಟಿದ್ದಾರೆ ಎನ್ನಲಾಗಿದೆ.

ನಿರಾಸೆಯ ವಾತಾವರಣ

ಇವರಿಬ್ಬರ ಕಾಂಬಿನೇಷನ್ ಇಷ್ಟಪಡುವ ಅಪಾರ ಅಭಿಮಾನಿ ಬಳಗಕ್ಕೆ ಈ ಬಾರಿ ಸಾಮಾಜಿಕ ಮಾಧ್ಯಮದಲ್ಲಿ ಯಾವುದೇ ಪೋಸ್ಟ್ ಕಾಣದೆ ನಿರಾಸೆಯಾಗಿದೆ.