Author: Gangadhar Saboji

14 July 2025

ಹದಿನೇಳನೇ ವಯಸ್ಸಿನಲ್ಲೇ ಚಿತ್ರರಂಗಕ್ಕೆ ಕಾಲಿಟ್ಟು ಸಾಧನೆ ಮಾಡಿದ್ದ ಸರೋಜಾದೇವಿ ಇನ್ನಿಲ್ಲ

ನಿಧನ 

ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಬಹುಭಾಷಾ ಹಿರಿಯ ನಟಿ ಬಿ.ಸರೋಜಾದೇವಿ ಅವರು ಸೋಮವಾರ ಬೆಂಗಳೂರಿನಲ್ಲಿ ನಿಧನ ಹೊಂದಿದ್ದಾರೆ.

ಜನನ

1938ರ ಜನವರಿ 7ರಂದು ಬಿ.ಸರೋಜಾದೇವಿ ಜನಿಸಿದ್ದರು. 

ಚಿತ್ರರಂಗಕ್ಕೆ ಎಂಟ್ರಿ

ಸರೋಜಾದೇವಿ ಅವರು 17ನೇ ವಯಸ್ಸಿನಲ್ಲೇ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟರು. ‘ಮಹಾಕವಿ ಕಾಳಿದಾಸ’ ಚಿತ್ರದ ಮೂಲಕ ಚಿತ್ರರಂಗಕ್ಕೆ ಪ್ರವೇಶಿಸಿದ್ದರು.

200ಕ್ಕೂ ಹೆಚ್ಚು ಚಿತ್ರ

ಐದು ಭಾಷೆಗಳಲ್ಲಿ 200ಕ್ಕೂ ಹೆಚ್ಚು ಚಿತ್ರಗಳಲ್ಲಿ ದಕ್ಷಿಣ ಭಾರತದ ಅಗ್ರಗಣ್ಯ ನಟರ ಜೊತೆ ಸರೋಜಾದೇವಿ ಅವರು ಅಭಿನಯಿಸಿದ್ದಾರೆ.

ಅಭಿನಯ ಸರಸ್ವತಿ

1965ರಲ್ಲಿ ನಟಿ ಬಿ.ಸರೋಜಾದೇವಿ ಅಭಿನಯ ಸರಸ್ವತಿ ಎಂದು ಬಿರುದು ಪಡೆದಿದ್ದರು.

ಪದ್ಮಶ್ರೀ, ಪದ್ಮಭೂಷಣ 

ನಟಿ ಬಿ.ಸರೋಜಾದೇವಿ ಅವರಿಗೆ 1969ರಲ್ಲಿ ಪದ್ಮಶ್ರೀ, 1992ರಲ್ಲಿ ಪದ್ಮಭೂಷಣ ಪ್ರಶಸ್ತಿ ಲಭಿಸಿತ್ತು.

ಗೌರವ ಡಾಕ್ಟರೇಟ್

1988ರಲ್ಲಿ ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ, 2006ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪಡೆದುಕೊಂಡಿದ್ದರು. 

ಜೀವಮಾನ ಸಾಧನೆ

ಕರ್ನಾಟಕ ಸರ್ಕಾರದಿಂದ ರಾಜ್‌ಕುಮಾರ್ ಜೀವಮಾನ ಸಾಧನೆ ಪ್ರಶಸ್ತಿ, ತಮಿಳುನಾಡು ಸರ್ಕಾರದಿಂದ ಕಲೈಮಾಮಣಿ ಜೀವಮಾನ ಸಾಧನೆ ಪ್ರಶಸ್ತಿ ಪಡೆದಿದ್ದರು.