ಎಲ್ಲಿ ಹೋಗಿಬಿಟ್ಟರು ನಟಿ ಕೃತಿ ಶೆಟ್ಟಿ, ಕೈಯಲ್ಲಿರುವ ಸಿನಿಮಾ ಎಷ್ಟು?

29 Mar 2025

By  Manjunatha

ಕರ್ನಾಟಕ ಮೂಲದ ಕೃತಿ ಶೆಟ್ಟಿ, ‘ಉಪ್ಪೆನ’ ಸಿನಿಮಾ ಮೂಲಕ ನಾಯಕಿಯಾಗಿ ಚಿತ್ರಜಗತ್ತಿಗೆ ಪರಿಚಯವಾದರು.

   ‘ಉಪ್ಪೆನ’ ಸಿನಿಮಾ ನಟಿ

‘ಉಪ್ಪೆನ’ ಸಿನಿಮಾದ ಹಿಟ್ ಬಳಿಕ ಕೃತಿ ಶೆಟ್ಟಿಗೆ ಒಂದರ ಹಿಂದೊಂದು ದೊಡ್ಡ ಸಿನಿಮಾ ಅವಕಾಶಗಳು ಅರಸಿ ಬಂದವು.

  ಅವಕಾಶ ಅರಸಿ ಬಂದವು

‘ಉಪ್ಪೆನ’ ಬಳಿಕ ನಾನಿ ಜೊತೆ, ನಾಗ ಚೈತನ್ಯ ಇನ್ನೂ ಕೆಲ ಸ್ಟಾರ್ ನಟರುಗಳೊಡನೆ ಸಿನಿಮಾ ಮಾಡಿದರು ಕೃತಿ ಶೆಟ್ಟಿ.

   ಸ್ಟಾರ್ ನಟರುಗಳೊಡನೆ

ಆದರೆ ಅದಾದ ಬಳಿಕ ಏಕಾ ಏಕಿ ಕೃತಿ ಶೆಟ್ಟಿಗೆ ತೆಲುಗು ಚಿತ್ರರಂಗದಿಂದ ಅವಕಾಶಗಳು ಕಡಿಮೆಯಾದವು.

  ತೆಲುಗು ಚಿತ್ರರಂಗದಿಂದ

ಎರಡು ವರ್ಷ ತೆಲುಗು ಬಿಟ್ಟರೆ ಇನ್ಯಾಯ ಸಿನಿಮಾದಲ್ಲಿಯೂ ನಟಿಸದಿದ್ದ ಕೃತಿ ಶೆಟ್ಟಿ ಕೈಯಲ್ಲಿ ಈಗ ಒಂದೂ ತೆಲುಗು ಸಿನಿಮಾ ಇಲ್ಲ.

    ತೆಲುಗು ಸಿನಿಮಾ ಇಲ್ಲ

ಕೃತಿ ಶೆಟ್ಟಿ ಇದೀಗ ತಮಿಳು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಅಲ್ಲಿಯೂ ಸಹ ಬಿ ಕ್ಲಾಸ್ ನಾಯಕರೊಡನೆ ನಟಿಸುತ್ತಿದ್ದಾರೆ.

     ತಮಿಳು ಸಿನಿಮಾನಲ್ಲಿ 

ಕಾರ್ತಿ ನಟನೆಯ ‘ವಾ ವಾತಿಯಾರ್’ ಹೆಸರಿನ ಹಾಸ್ಯಮಯ ಸಿನಿಮಾನಲ್ಲಿ ಕೃತಿ ಶೆಟ್ಟಿ ನಟಿಸುತ್ತಿದ್ದಾರೆ.

    ಕಾರ್ತಿ ಜೊತೆ ಸಿನಿಮಾ

ಜಯಂ ರವಿ ನಟನೆಯ ‘ಜೀನಿ’ ಹೆಸರಿನ ಫ್ಯಾಂಟಸಿ ಸಿನಿಮಾದಲ್ಲಿ ಕೃತಿ ಶೆಟ್ಟಿ ನಟಿಸುತ್ತಿದ್ದಾರೆ.

ಜಯಂ ರವಿ ಜೊತೆ ಸಿನಿಮಾ

‘ಲವ್ ಟುಡೆ’, ‘ಡ್ರ್ಯಾಗನ್’ ಖ್ಯಾತಿಯ ನಾಯಕನ ಜೊತೆ ‘ಲವ್ ಇನ್ಷುರೆನ್ಸ್ ಕಂಪೆನಿ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

        ‘ಡ್ರ್ಯಾಗನ್’ ನಾಯಕ