ನೋಟುಗಳನ್ನು ಎಣಿಸಿ ಕೈ ತೊಳೆಯದಿದ್ದರೆ ಬರುತ್ತೆ ರೋಗ!
TV9 Kannada Logo For Webstory First Slide

10 April 2025

Pic credit - GettyImages

Author: Preethi Bhat Gunavante

ನೋಟುಗಳನ್ನು ಎಣಿಸಿ ಕೈ ತೊಳೆಯದಿದ್ದರೆ ಬರುತ್ತೆ ರೋಗ!

ದಿನನಿತ್ಯ ಹಲವಾರು ವಸ್ತುಗಳನ್ನು ಸ್ಪರ್ಶಿಸುತ್ತೇವೆ. ಆದರೆ ಕೆಲವು ವಸ್ತುಗಳನ್ನು ಮುಟ್ಟಿದಾಗ ತಪ್ಪದೆ ಕೈ ತೊಳೆಯುವ ಅಭ್ಯಾಸ ರೂಢಿಸಿಕೊಳ್ಳಿ.

Pic credit -  GettyImages

ನ್ಯೂಯಾರ್ಕ್ ನಲ್ಲಿ ನಡೆದ ಒಂದು ಸಂಶೋಧನೆಯಲ್ಲಿ, ವಿಜ್ಞಾನಿಗಳು ಕರೆನ್ಸಿ ನೋಟುಗಳಲ್ಲಿ ವೈರಸ್ಗಳಿವೆ ಎಂಬುದನ್ನು ಕಂಡುಹಿಡಿದಿದ್ದಾರೆ.

Pic credit -  GettyImages

ಕರೆನ್ಸಿ ನೋಟುಗಳನ್ನು ಮುಟ್ಟಿದ ನಂತರ ನಿಮ್ಮ ಕೈಗಳನ್ನು ಚೆನ್ನಾಗಿ ತೊಳೆಯುವುದು ಆರೋಗ್ಯಕ್ಕೆ ಒಳ್ಳೆಯದು.

Pic credit -  GettyImages

ಇನ್ನು ರೆಸ್ಟೋರೆಂಟ್ ಅಥವಾ ಹೋಟೆಲ್ ಗಳಲ್ಲಿನ ಮೆನುಕಾರ್ಡ್ ಗಳಲ್ಲಿ ಬ್ಯಾಕ್ಟೀರಿಯಾಗಳಿರುತ್ತವೆ. ಹಾಗಾಗಿ ಮೆನುಗಳನ್ನು ಮುಟ್ಟಿದ ತಕ್ಷಣ ನಿಮ್ಮ ಕೈಗಳನ್ನು ತೊಳೆಯಿರಿ.

Pic credit -  GettyImages

ಆಸ್ಪತ್ರೆಯಲ್ಲಿನ ಬೆಂಚುಗಳು, ಡೋರ್ ಹ್ಯಾಂಡಲ್ ಗಳು, ಎಕ್ಸ್-ರೇ ಯಂತ್ರಗಳು, ಬಯೋಮೆಟ್ರಿಕ್ ಪ್ಯಾಡ್ ಗಳು ಮುಂತಾದ ವಸ್ತುಗಳನ್ನು ಮುಟ್ಟಿದ ತಕ್ಷಣ ಕೈ ತೊಳೆಯಿರಿ.

Pic credit -  GettyImages

ಬಸ್ಸು, ರೈಲು, ಮೆಟ್ರೋ ಗಳಲ್ಲಿನ ಹ್ಯಾಂಡಲ್ , ಆಸನ, ಬಾಗಿಲಿನ ಹಿಡಿತಗಳನ್ನು ಅನೇಕರು ಸ್ಪರ್ಶಿಸುತ್ತಾರೆ. ಹಾಗಾಗಿ ಇವುಗಳನ್ನು ಸ್ಪರ್ಶಿಸಿದ ತಕ್ಷಣ ಕೈಗಳನ್ನು ತೊಳೆದುಕೊಳ್ಳಿ.

Pic credit -  GettyImages

ವಾಲ್ ಸ್ಟ್ರೀಟ್ ಜರ್ನಲ್ ಅಧ್ಯಯನದ ಪ್ರಕಾರ, ಕಚೇರಿ ಅಥವಾ ಇನ್ನಿತರ ಆಫೀಸ್ ಗಳಲ್ಲಿ ಒಂದು ಪೆನ್ನನ್ನು ಹಲವಾರು ಜನ ಬಳಕೆ ಮಾಡುತ್ತಾರೆ.

Pic credit -  GettyImages

ಹಲವಾರು ಜನ ಬಳಕೆ ಮಾಡುವ ಪೆನ್ ಟಾಯ್ಲೆಟ್ ಸೀಟ್ ಗಿಂತ 10 ಪಟ್ಟು ಹೆಚ್ಚು ಕೀಟಾಣುಗಳನ್ನು ಹೊಂದಿರುತ್ತದೆ. ಹಾಗಾಗಿ ಪೆನ್ನುಗಳನ್ನು ಬಳಸುವಾಗ ವಿಶೇಷ ಕಾಳಜಿ ವಹಿಸಬೇಕು.

Pic credit -  GettyImages

ನಮ್ಮ ಕೈ ಆರೋಗ್ಯಕ್ಕೆ ಬಾಗಿಲಿದ್ದಂತೆ. ರೋಗಗಳು ಬರಬಾರದು ಎಂದರೆ ಯಾವುದೇ ವಸ್ತು ಮುಟ್ಟಿದಾಗಲೂ ಕೈ ತೊಳೆಯುವ ಅಭ್ಯಾಸವನ್ನು ರೂಢಿಸಿಕೊಳ್ಳಬೇಕು.

Pic credit -  GettyImages