08 April 2025

Pic credit - GettyImages

Author: Malashree Anchan

ಈ ಬೇಸಿಗೆಯಲ್ಲಿ ಬೆವರಿನ ದುರ್ವಾಸನೆ ಹೋಗಲಾಡಿಸಲು ಇಲ್ಲಿವೆ ಸಲಹೆ

ಕಂಕುಳ ಬೆವರು ವಾಸನೆ ಮುಜುಗರವನ್ನು ತರಿಸುತ್ತವೆ. ಈ ಬೆವರಿನ ದುರ್ವಾಸನೆ ತೊಡೆದು ಹಾಕಲು ಈ ಸಿಂಪಲ್‌ ಟಿಪ್ಸ್‌ ಪಾಲಿಸಿ

Pic credit -  GettyImages

ಬೆವರಿನ ವಾಸನೆಯಿಂದ ಮುಕ್ತಿ ಪಡೆಯಲು ಅಲೋವೆರಾ ಜೆಲ್‌ ಅಥವಾ ತಾಜಾ ಅಲೋವೆರಾವನ್ನು ಕಂಕುಳಿಗೆ ಹಚ್ಚಿ 10-15 ನಿಮಿಷಗಳ ಬಳಿಕ ತೊಳೆಯಿರಿ.

Pic credit -  GettyImages

ಪಟಿಕ ಅಥವಾ ಆಲಂ ಕಲ್ಲು ಬಳಸುವುದರಿಂದ ದೇಹದಲ್ಲಿನ ಬೆವರಿನ ದುರ್ವಾಸನೆ ಹೋಗಲಾಡಿಸಬಹುದು.

Pic credit -  GettyImages

ಕಂಕುಳಿನ ದುರ್ವಾಸನೆಯನ್ನು ಹೋಗಲಾಡಿಸಲು, ತೆಂಗಿನ ಎಣ್ಣೆಯನ್ನು ಕಂಕುಳ ಮೇಲೆ ಹಚ್ಚಿ15 ರಿಂದ 20 ನಿಮಿಷಗಳ ಬಳಿಕ ತೊಳೆಯಿರಿ.

Pic credit -  GettyImages

ಹತ್ತಿಯಲ್ಲಿ ಗುಲಾಬಿ ನೀರನ್ನು ಅದ್ದಿ ಕಂಕುಳನ್ನು ಸ್ವಚ್ಛಗೊಳಿಸಿ. ಇಲ್ಲವೇ ಅದನ್ನು ಡಿಯೋ ರೀತಿಯಲ್ಲಿ ಬಳಸಬಹುದು.

Pic credit -  GettyImages

ನಿಂಬೆ ಹಣ್ಣನ್ನು ಬಳಸಿ. ಹೌದು ಪ್ರತಿದಿನ ನೀರಿಗೆ ಸ್ವಲ್ಪ ನಿಂಬೆ ರಸ ಹಿಂಡಿ, ಆ ನೀರಿನಿಂದ ಸ್ನಾನ ಮಾಡುವ ಮೂಲಕ ದೇಹದ ದುರ್ವಾಸನೆ ದೂರ ಮಾಡಬಹುದು.  

Pic credit -  GettyImages

ನೀರಿಗೆ ಸ್ವಲ್ಪ ಟೀ ಟ್ರೀ ಎಣ್ಣೆ ಬೆರೆಸಿ ಕಂಕುಳಿಗೆ ಸ್ಪ್ರೇ ಮಾಡುವ ಮೂಲಕ ಬೆವರಿನ ದುರ್ನಾತದಿಂದ ಮುಕ್ತಿ ಪಡೆಯಬಹುದು.

Pic credit -  GettyImages

ಸ್ವಲ್ಪ ನೀರಿಗೆ ಎರಡು ಚಮಚ ಆಪಲ್‌ ಸೈಡರ್‌ ವಿನೆಗರ್‌ ಬೆರೆಸಿ ಅದರಿಂದ ಅಂಡರ್‌ ಆರ್ಮ್‌ ಸ್ವಚ್ಛಗೊಳಿಸುವ ಮೂಲಕ ಬೆವರಿನ ದುರ್ನಾತದಿಂದ ಮುಕ್ತಿ ಪಡೆಯಿರಿ.

Pic credit -  GettyImages

ಇನ್ನೊಂದು ಮುಖ್ಯವಾದ ಅಂಶವೇನೆಂದರೆ, ಬಿಗಿಯಾದ ಬಟ್ಟೆ ಕಂಕುಳಿನ ಬೆವರುವಿಕೆಯನ್ನು ಹೆಚ್ಚು ಮಾಡುತ್ತದೆ.

Pic credit -  GettyImages