ನಿಮ್ಮ ಜೀವನದ ಈ ಖಾಸಗಿ ವಿಷಯಗಳು ಗುಟ್ಟಾಗಿರಲಿ

25 March 2025

Pic credit - Pintrest

Sainanda

ವೈಯುಕ್ತಿಕ ಜೀವನದ ಗುರಿಗಳು ಹಾಗೂ ಕನಸುಗಳು ಗುಟ್ಟಾಗಿ ಇರಲಿ. ನಿಮ್ಮ ಕನಸುಗಳ ಬಗ್ಗೆ ಹಂಚಿಕೊಳ್ಳುವಾಗ ಎದುರಾಗುವ ಟೀಕೆ, ಒತ್ತಡದಿಂದ ಉತ್ಸಾಹ ಕುಗ್ಗಬಹುದು.

Pic credit - Pintrest

ಆದಾಯ, ಉಳಿತಾಯ, ಸಾಲ ಹಾಗೂ ಆರ್ಥಿಕ ತೊಂದರೆಗಳು ಖಾಸಗಿಯಾಗಿರಲಿ. ಆರ್ಥಿಕ ಸ್ಥಿತಿಯ ಬಗ್ಗೆ ಯಾರೊಂದಿಗೂ ಚರ್ಚಿಸಬೇಡಿ.

Pic credit - Pintrest

ಪ್ರೇಮ ಜೀವನ, ಸಂಬಂಧದಲ್ಲಿನ ಸಮಸ್ಯೆಗಳನ್ನು ಯಾರೊಂದಿಗೂ ಹೇಳಬೇಡಿ. ಇದು ಸಂಗಾತಿಯ ನಂಬಿಕೆಯನ್ನು ಕಳೆದುಕೊಳ್ಳುವಂತೆ ಮಾಡುತ್ತದೆ.

Pic credit - Pintrest

ಕೌಟುಂಬಿಕ ಸಮಸ್ಯೆಗಳನ್ನು ಹೊರಗಿನವರೊಂದಿಗೆ ಚರ್ಚಿಸಬೇಡಿ, ಇದು ತಪ್ಪು ತಿಳುವಳಿಕೆಗೆ ಕಾರಣವಾಗುತ್ತದೆ, ನಂಬಿಕೆ ಕಳೆದುಕೊಳ್ಳುವಂತೆ ಮಾಡುತ್ತದೆ.

Pic credit - Pintrest

ನೀವು ಸಾಮಾಜಿಕ ಕೆಲಸಗಳ ಬಗ್ಗೆ ಹೇಳಿಕೊಳ್ಳಬೇಡಿ. ಇದು ನಿಮ್ಮ ಬಗ್ಗೆ ನೀವೇ ಹೇಳಿಕೊಂಡಂತೆ  ಆಗುತ್ತದೆ.

Pic credit - Pintrest

ಪ್ರತಿಯೊಂದು ತಪ್ಪುಗಳನ್ನು ಇತರರೊಂದಿಗೆ ಹಂಚಿಕೊಳ್ಳಬೇಡಿ. ಇದು ನಿಮ್ಮ ಮೇಲಿನ ಅಭಿಪ್ರಾಯವೇ ಬದಲಾಗಲು ಕಾರಣವಾಗುತ್ತದೆ.

Pic credit - Pintrest

ನಿಮ್ಮ ದೌರ್ಬಲ್ಯ ಹಾಗೂ ಅಭದ್ರತೆಗಳ ಬಗ್ಗೆ ಯಾರಿಗೂ ಹೇಳಬೇಡಿ. ಸ್ವಾರ್ಥಕ್ಕಾಗಿ ನಿಮ್ಮ ದೌರ್ಬಲ್ಯಗಳನ್ನೇ ಬಳಸಿಕೊಳ್ಳಬಹುದು.

Pic credit - Pintrest

ಭವಿಷ್ಯದ ಯೋಜನೆಗಳು ಗುಟ್ಟಾಗದಿರಲಿ. ಈ ಬಗ್ಗೆ ನಿಮ್ಮ ಸುತ್ತಲಿನವರಿಗೆ ತಿಳಿದರೆ ನಿಮ್ಮ ಮೇಲೆ ಅಸೂಯೆ, ಹೊಟ್ಟೆ ಕಿಚ್ಚು ಪಡಬಹುದು.

Pic credit - Pintrest

ನೀವು ಆತ್ಮೀಯರ ಬಗ್ಗೆ ನಿಮ್ಮ ಸುತ್ತಲಿನ ವ್ಯಕ್ತಿಗಳ ಜೊತೆಗೆ ಚರ್ಚಿಸಬೇಡಿ. ಕೆಲವೊಮ್ಮೆ ಅವರು ಹೇಳುವ ಮಾತುಗಳು ಆತ್ಮೀಯ ವ್ಯಕ್ತಿಗಳ ಮೇಲೆ ಕೆಟ್ಟ ಅಭಿಪ್ರಾಯ  ಮೂಡಲು ಕಾರಣವಾಗಬಹುದು.

Pic credit - Pintrest