ಹಾಗಲಕಾಯಿಯ ಕಹಿ ತೆಗೆದು ಹಾಕಲು ಇಲ್ಲಿದೆ ಟಿಪ್ಸ್

24 March 2025

Pic credit - Pintrest

Sainanda

ಹಾಗಲಕಾಯಿ ರುಚಿಯಲ್ಲಿ ಕಹಿಯಾಗಿದ್ದರೂ ಕೂಡ ಆರೋಗ್ಯಕ್ಕೆ ಸಿಹಿಯಾಗಿದೆ. ಇದರಲ್ಲಿ ಹಲವಾರು ಆರೋಗ್ಯ ಪ್ರಯೋಜನಗಳಿವೆ.

Pic credit - Pintrest

ಹಾಗಲಕಾಯಿಯೂ ವಿಟಮಿನ್ ಸಿ, ಸತು, ಕಬ್ಬಿಣ, ಪೊಟ್ಯಾಸಿಯಂ, ಫೋಲಿಕ್ ಆಮ್ಲ, ವಿಟಮಿನ್-ಬಿ, ಕ್ಯಾಲ್ಸಿಯಂ ಸೇರಿದಂತೆ ಹತ್ತಾರು ಪೋಷಕಾಂಶಗಳಿಂದ ಸಮೃದ್ಧವಾಗಿದೆ.

Pic credit - Pintrest

ಮಧುಮೇಹ, ಕೊಲೆಸ್ಟ್ರಾಲ್ ನಿಯಂತ್ರಣಕ್ಕೂ ಕೂಡ ಇದು ಅತ್ಯುತ್ತಮ ಆಹಾರವಾಗಿದ್ದು,  ಆರೋಗ್ಯಕ್ಕೆ ಬಹಳ ಒಳ್ಳೆಯದು.

Pic credit - Pintrest

ಈ ತರಕಾರಿಯ ಕಹಿ ಅಂಶ ಹೊಂದಿರುವ ಕಾರಣ ಹೆಚ್ಚಿನವರು ಇದನ್ನು ತಿನ್ನಲು ಇಷ್ಟಪಡುವುದಿಲ್ಲ. ಆದರೆ ಈ ಸಲಹೆ ಅನುಸರಿಸಿದರೆ ಇದರ ಕಹಿ ಗುಣ ಹೋಗುವಂತೆ ಮಾಡಬಹುದು.

Pic credit - Pintrest

ಹಾಗಲಕಾಯಿಯ ಒರಟಾದ ಸಿಪ್ಪೆಯಲ್ಲಿ ಹೆಚ್ಚಿನ ಪ್ರಮಾಣದ ಕಹಿ ಅಡಗಿರುತ್ತದೆ, ಹೀಗಾಗಿ ಸಿಪ್ಪೆಯನ್ನು ಸಂಪೂರ್ಣವಾಗಿ ತೆಗೆಯಿರಿ.

Pic credit - Pintrest

ಹಾಗಲಕಾಯಿ ಕಹಿ ಗುಣ ತೆಗೆದುಹಾಕಲು ಅದರ ಬೀಜಗಳನ್ನು ತೆಗೆಯುವುದು ಹೆಚ್ಚು ಪರಿಣಾಮಕಾರಿ.

Pic credit - Pintrest

ಈ ತರಕಾರಿಯ ಕಹಿಗುಣವನ್ನು ತೆಗೆದು ಹಾಕಲು ಕತ್ತರಿಸಿಟ್ಟ ಹಾಗಲಕಾಯಿಗೆ ಉಪ್ಪು ಹಾಕಿ ಸ್ವಲ್ಪ ಹೊತ್ತು ನೆನೆಸಿಡುವುದು ಒಳ್ಳೆಯದು.

Pic credit - Pintrest

ಹಾಗಲಕಾಯಿ ಕತ್ತರಿಸಿ, ಮೊಸರಿನೊಂದಿಗೆ ಬೆರೆಸಿ ಒಂದು ಗಂಟೆ ನೆನೆಸಿಡಬೇಕು. ಆ ಬಳಿಕ ತೊಳೆಯುವುದರಿಂದ ಕಹಿ ಗುಣವು ದೂರವಾಗುತ್ತದೆ.

Pic credit - Pintrest

ಹಾಗಲಕಾಯಿ ಪಲ್ಯ ಮಾಡುವಾಗ ಅದಕ್ಕೆ ಮಾವಿನ ಪುಡಿ ಬೆರೆಸಿದ್ರೆ ಕಹಿ ಗುಣವು ನಿವಾರಣೆಯಾಗುತ್ತದೆ.

Pic credit - Pintrest